ನೆಹರು ಮೆಮೋರಿಯಲ್ ಕಾಲೇಜು : ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಂದ ವಿಶಿಷ್ಟ ಶೈಕ್ಷಣಿಕ ಸಾಧನೆ

0

ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಬಿ.ಎ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯದ ೪ನೇ ಸೆಮಿಸ್ಟರ್ ಪದವಿ ಪರೀಕ್ಷೆಯಲ್ಲಿ , “Statistics for Economics”   ಎಂಬ ವಿಷಯದಲ್ಲಿ ಶೇಕಡಾ 1೦೦ ಅಂಕಗಳನ್ನು ಪಡೆದು ಸಾಧನೆ ಮಾಡಿರುತ್ತಾರೆ.


ಕು. ಫರ್ಝಾನಾ ಬಿ ಅವರು 1೦೦/1೦೦ ಮತ್ತು ಕು. ಕೃಷ್ಣವೇಣಿ ಇ ವಿ ಅವರು 6೦/6೦ ಅಂಕಗಳನ್ನು ಪಡೆದಿರುತ್ತಾರೆ. ಕು. ಫರ್ಝಾನಾ ಬಿ ಅವರ ತಂದೆ ರಫೀಕ್, ತಾಯಿ ಆಯಿಷಾ ಇವರು ಗುತ್ತಿಗಾರಿನವರು. ಕು. ಕೃಷ್ಣವೇಣಿ ಇ ವಿ, ತಂದೆ ಶಶಿಧರನ್, ತಾಯಿ ರೋಹಿನಿ, ಕಲ್ಲಪಳ್ಳಿಯವರು. ಇವರಿಗೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಿಜಯಲಕ್ಷ್ಮಿ ಎನ್ ಎಸ್ ಅವರ ಮಾರ್ಗದರ್ಶನದಲ್ಲಿ ಉತ್ತಮ ಸಾಧನೆ ಮಾಡಿರುತ್ತಾರೆ. ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.