ನವೆಂಬರ್ 4 ರಂದು ಗುತ್ತಿಗಾರು ಪದವಿಪೂರ್ವ ಕಾಲೇಜು ,ಸುಳ್ಯ ಇಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ (ಪದವಿ ಪೂರ್ವ ) ವತಿಯಿಂದ ನಡೆದ ಪಿಯುಸಿ ವಿದ್ಯಾರ್ಥಿಗಳಾ ತಾಲೂಕು ಕ್ರೀಡಾಕೂಟದಲ್ಲಿ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ
ಭಾಗವಹಿಸಿ ಒಟ್ಟು 41 ಪದಕ ಹಾಗೂ ಬಾಲಕರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೂಂಡಿದ್ದಾರೆ.
ಸಂಸ್ಥೆಯ ದ್ವಿತೀಯ ಪಿಯುಸಿ ವಿಜ್ಞಾನದ ವಿದ್ಯಾರ್ಥಿ ಸುಮಂತ್ ಕೆ ಬಿ – 1500 ಮೀಟರ್ ಓಟದಲ್ಲಿ ಪ್ರಥಮ , 800 ಮೀಟರ್ ಓಟದಲ್ಲಿ ಪ್ರಥಮ, 400 ಮೀಟರ್ ಓಟದಲ್ಲಿ ಪ್ರಥಮ , 4×100 ಮೀಟರ್ ರಿಲೇಯಲ್ಲಿ ಪ್ರಥಮ , 4×400 ಮೀಟರ್ ರಿಲೇಯಲ್ಲಿ ಪ್ರಥಮಸ್ಥಾನ ಪಡೆದು ಚಾಂಪಿಯನ್ ಶಿಪ್ ಪಡೆದಿದ್ದಾರೆ. ದ್ವಿತೀಯ ಪಿಯುಸಿ ವಿಜ್ಞಾನದ ವಿದ್ಯಾರ್ಥಿ ನಿಹಾರ್ ಕೆ ಬಿ – 4×100 ಮೀಟರ್ ರಿಲೇಯಲ್ಲಿ ಪ್ರಥಮ, 4×400 ಮೀಟರ್ ರಿಲೇಯಲ್ಲಿ ಪ್ರಥಮ , ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ, ಎತ್ತರ ಜಿಗಿತದಲ್ಲಿ ಪ್ರಥಮ , ಹರ್ಡಲ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿರುತ್ತಾರೆ. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಧ್ರುವ ಟಿ ಎಸ್ – 100 ಮೀಟರ್ ಓಟದಲ್ಲಿ ಪ್ರಥಮ , 200 ಮೀಟರ್ ಓಟದಲ್ಲಿ ಪ್ರಥಮ , 4×100 ಮೀಟರ್ ರಿಲೇಯಲ್ಲಿ ಪ್ರಥಮ , 4×400 ಮೀಟರ್ ರಿಲೇಯಲ್ಲಿ ಪ್ರಥಮಸ್ಥಾನ , ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ . ಪ್ರಥಮ ಪಿಯುಸಿಯ ವಿಜ್ಞಾನದ ಅನನ್ಯ ಕೆ ಬಿ – ಎತ್ತರ ಜಿಗಿತ ಪ್ರಥಮ , ಹರ್ಡಲ್ ಓಟ ಪ್ರಥಮ , 4×100 ಮೀಟರ್ ರಿಲೇ ಪ್ರಥಮ , 4×400 ಮೀಟರ್ ರಿಲೇ ದ್ವಿತೀಯ , ಪ್ರಥಮ ಪಿಯುಸಿ ವಿಜ್ಞಾನದ ಇಂಚರ ಪಿ ಆರ್ – 4×100 ಮೀಟರ್ ರಿಲೇ ಪ್ರಥಮ , ಎತ್ತರ ಜಿಗಿತ ದ್ವಿತೀಯ , 4×400 ಮೀಟರ್ ರಿಲೇ ದ್ವಿತೀಯ , ಉದ್ದ ಜಿಗಿತ ತೃತೀಯ , ವೇಗದ ನಡಿಗೆ ತೃತೀಯ . ಪ್ರಥಮ ಪಿಯುಸಿ ವಿಜ್ಞಾನದ ಪೂಜಶ್ರೀ – 4×100 ಮೀಟರ್ ರಿಲೇ ಪ್ರಥಮ , 4×400 ಮೀಟರ್ ರಿಲೇ ದ್ವಿತೀಯ, 800 ಮೀಟರ್ ಓಟ ದ್ವಿತೀಯ, 1500 ಮೀಟರ್ ಓಟ ತೃತೀಯ. ವಿಜ್ಞಾನದ ಮಹಮದ್ ರಾಹಿಲ್ – 100 ಮೀಟರ್ ಓಟ ದ್ವಿತೀಯ , 200 ಮೀಟರ್ ಓಟ ತೃತ್ತೀಯ , 4×100 ಮೀಟರ್ ರಿಲೇ ಪ್ರಥಮ ಸ್ಥಾನ . ದ್ವಿತೀಯ ಪಿಯುಸಿ ವಾಣಿಜ್ಯದ ಗೌರವ್ ನಿಡ್ಯಮಲೆ – 4×100 ಮೀಟರ್ ರಿಲೇ ಪ್ರಥಮ , ಜಾವೆಲಿನ್ ಎಸೆತ ದ್ವಿತೀಯ , 3000 ಮೀಟರ್ ಓಟ ತೃತೀಯ . ದ್ವಿತೀಯ ಪಿಯುಸಿ ವಾಣಿಜ್ಯದ ಅಕ್ಷತ್ – ಹರ್ಡಲ್ ಓಟದಲ್ಲಿ ದ್ವಿತೀಯ , ಸುತ್ತಿಗೆ ಎಸೆಯುವಿಕೆಯಲ್ಲಿ ದ್ವಿತೀಯ . ಪ್ರಥಮ ಪಿಯುಸಿ ವಿಜ್ಞಾನದ ಕುಶಿ ಎ ಎಸ್ – 4×100 ಮೀಟರ್ ರಿಲೇ ಪ್ರಥಮ , ಡಿಸ್ಕಸ್ ಎಸೆತ ತೃತೀಯ , ದ್ವಿತೀಯ ಪಿಯುಸಿ ವಾಣಿಜ್ಯದ ತೃಪ್ತಿ ಎಂ 4×400 ಮೀಟರ್ ರಿಲೆ ದ್ವಿತೀಯ , ಪ್ರಥಮ ಪಿಯುಸಿ ವಿಜ್ಞಾನದ ಆಯುಷ್ ವೇಗದ ನಡಿಗೆ ತೃತೀಯ . ಪ್ರಥಮ ಪಿಯುಸಿ ವಾಣಿಜ್ಯದ ನಿಶಾಂತ್ ಟ್ರಿಪಲ್ ಜಂಪ್ ಪ್ರಥಮ. ದ್ವಿತೀಯ ಪಿಯುಸಿ ವಿಜ್ಞಾನದ ಶಶಾಂಕ್ ಕೆ ವೇಗದ ನಡಿಗೆ ದ್ವಿತೀಯ . ಸಂಸ್ಥೆಯ ಈ ಎಲ್ಲಾ ವಿದ್ಯಾರ್ಥಿಗಳು ನವೆಂಬರ 11 ರಂದು ಮಂಗಳ ಕ್ರೀಡಾಂಗಣ ಮಂಗಳೂರು ಇಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.