ಮುರುಳ್ಯ ಗ್ರಾಮದ ಲಿಂಗಪ್ಪ ಗೌಡ ಅಲೇಕಿಯವರು ಅಲ್ಪ ಕಾಲದ ಅಸೌಖ್ಯದಿಂದ ನ. 4ರಂದು ನಿಧನರಾದರು.
ಅವರು ಧಾರ್ಮಿಕ ಕ್ಷೇತ್ರದಲ್ಲಿ, ಆರ್‌ಎಸ್‌ಎಸ್ ಸಂಘದಲ್ಲಿ, ಸಕ್ರಿಯ ಸದಸ್ಯರಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ದುಡಿದು ಕೃಷಿಕರಾಗಿ ಗುರುತಿಸಿಕೊಂಡು ಜನಾನುರಾಗಿಯಾಗಿದ್ದರು.
ಮೃತರು ಪತ್ನಿ ಕಮಲ,ಪುತ್ರರಾದ ರಾಧಾಕೃಷ್ಣ, ಚಂದ್ರಶೇಖರ, ವಸಂತ ಕೃಷ್ಣ, ಪುತ್ರಿಯರಾದ ಶ್ರೀಮತಿ ಶಶಿಕಲಾ ಕುಶಾಲಪ್ಪಗೌಡ ಏನೆಕಲ್ಲು, ಗಾಯತ್ರಿ, ಅಳಿಯ, ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.