ಮೈಸೂರು ಶ್ರೀ ರಾಮಕೃಷ್ಣ ವಿದ್ಯಾಶಾಲಾ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸುಳ್ಯದಲ್ಲಿ ಸಾಮಾನ್ಯ ಜ್ಞಾನ ಪರೀಕ್ಷೆ

0

ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ, ಅದು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪ : ಡಾ.ಲೀಲಾಧರ್

ಶ್ರೀ ರಾಮಕೃಷ್ಣ ವಿದ್ಯಾಶಾಲಾ ಮೈಸೂರು ಇದರ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಅದರ ಸುವರ್ಣ ಮಹೋತ್ಸವ ವರ್ಷ ಆಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಶ್ರೀಮತ್ ಸ್ವಾಮಿ ಶಾಂಭವಾನಂದಜಿ ಸ್ಮರಣಾರ್ಥ ಅಂತರ್ ಪ್ರೌಢಶಾಲಾ ಸಾಮಾನ್ಯ ಜ್ಞಾನ ಪರೀಕ್ಷೆ ಸುಳ್ಯ ರೋಟರಿ ಸಭಾಂಗಣದಲ್ಲಿ ನ.05 ರಂದು ನಡೆಯಿತು.

ಕಾರ್ಯಕ್ರಮವನ್ನು ಕೆವಿಜಿ ಆಯುರ್ವೇದ ಕಾಲೇಜು ಪ್ರಾಂಶುಪಾಲರಾದ ಡಾ.ಲೀಲಾಧರ್ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಯಾವುದೇ ಸ್ಪರ್ಧೆ ಏರ್ಪಡಿಸಿದರೆ ಅದರಲ್ಲಿ ಭಾಗವಹಿಸುವುದು ಮುಖ್ಯ ಹೊರತು ಗೆಲುವು ಮುಖ್ಯವಲ್ಲ ಗೆದ್ದ ವಿದ್ಯಾರ್ಥಿಗಳು ಈ ಬಾರಿ ಪ್ರಶಸ್ತಿ ಪಡೆದರೆ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಮುಂದಿನ ಬಾರಿ ಪ್ರಶಸ್ತಿ ಗಳಿಸಲು ಪ್ರೇರಣೆಯಾಗುತ್ತದೆ ಆದರಿಂದ ವಿದ್ಯಾರ್ಥಿಗಳ ಇಂತಹ ಸ್ಪರ್ಧೆಗಳನ್ನು ತಪ್ಪದೇ ಬಾಗವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕ ರೊ.ಗಿರಿಜಾ ಶಂಕರ್ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ವೇದಿಕೆಯಲ್ಲಿ ರಾಮಕೃಷ್ಣ ವಿದ್ಯಾಶಾಲಾ ಹಳೆ ವಿದ್ಯಾರ್ಥಿ ಉದ್ಯಮಿ ಹರಿರಾಯ ಕಾಮತ್,ಉಪಸ್ಥಿತರಿದ್ದರು.
ರಾಮಕೃಷ್ಣ ವಿದ್ಯಾಶಾಲಾ ಹಳೆ ವಿದ್ಯಾರ್ಥಿಗಳಾದ ಸುಳ್ಯದ ಯುವ ಉದ್ಯಮಿ ಹೇಮಂತ್ ಕಾಮತ್,ಅರವಿಂದ್ ಕಾಮತ್ (ಕಾಮತ್ ಕೊಲ್ಡ್ ಹೌಸ್) ಮತ್ತು ಶ್ಯಾಮ್ ಸುಂದರ್ ಕೊಲ್ಚಾರ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ ಕಾರ್ಯಕ್ರಮದ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಸಹಕರಿಸಿದ ರೋಟರಿ ವಿದ್ಯಾಸಂಸ್ಥೆ ಶಿಕ್ಷಕಿಯರಾದ ಜಯಶ್ರೀ. ಕೆ,ಉಷಾ ಪಿ ಎಂ,ವೀಣಾ ಶೆಡಿಕಜೆ,ನೀತಾಶ್ರೀ ಯವರನ್ನು ಗೌರವಿಸಲಾಯಿತು.


ಸ್ಪರ್ಧೆಯಲ್ಲಿ110 ವಿದ್ಯಾರ್ಥಿಗಳು ಭಾಗವಹಿಸಿದ್ದರು.
10 ನೇ ತರಗತಿ ವಿಭಾಗದ ಸುಳ್ಯ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯ ಸಮನ್ಯು ಎಸ್ ಶೆಟ್ಟಿ ಪ್ರಥಮ ಸ್ಥಾನ, ರೋಟರಿ ವಿದ್ಯಾಸಂಸ್ಥೆಯ ಪ್ರಣಮ್ಯ ಎನ್ ಆಳ್ವ ದ್ವಿತೀಯ ಸ್ಥಾನ ಹಾಗೂ ಜೊಸೆಫ್ ವಿದ್ಯಾಸಂಸ್ಥೆ ಯ ಜಸ್ವಿ ತೃತೀಯ ಸ್ಥಾನವನ್ನು ಪಡೆದುಕೊಂಡರು.


9ನೇ ತರಗತಿ ವಿಭಾಗದಲ್ಲಿ ಅಡ್ಕಾರ್ ವಿನೋಬಾ ನಗರ ವಿವೇಕಾನಂದ ವಿದ್ಯಾಸಂಸ್ಥೆಯ ಗೌರಿ.ಕೆ ಪ್ರಥಮ ಸ್ಥಾನ, ಜೊಸೆಫ್ ವಿದ್ಯಾಸಂಸ್ಥೆಯ ಅಭಿರಾಮ್ ದ್ವಿತೀಯ ಸ್ಥಾನವನ್ನು ಹಾಗೂ ಜೊಸೆಫ್ ವಿದ್ಯಾಸಂಸ್ಥೆಯ ನೀಕ್ಷಾ ಡಿಸೋಜ ಮತ್ತು ಗೂನಡ್ಕ ಮಾರುತಿ ವಿದ್ಯಾಸಂಸ್ಥೆಯ ಕಾರ್ತಿಕ್ ಪ್ರಸಾದ್ ತೃತೀಯ ಸ್ಥಾನವನ್ನು ಪಡೆದುಕೊಂಡರು.