ಪಕ್ಕಾ ಪ್ರೋ ಮಾದರಿಯ ಕಬಡ್ಡಿ ಪಂದ್ಯಾಟ
ರಾಷ್ಟ್ರಮಟ್ಟದ ಪುರುಷರ, ಮಹಿಳೆಯರ 16 ಎ’ ಗ್ರೇಡ್ ತಂಡಗಳ ಮಧ್ಯೆ ಸೆಣಸಾಟ
ಮೂರು ದಿನಗಳ ಕಬಡ್ಡಿ ಉತ್ಸವಕ್ಕೆ ಸಿದ್ಧಗೊಂಡಿದೆ ಅದ್ಭುತವಾದ ಸುಸಜ್ಜಿತ ಒಳ ಕ್ರೀಡಾಂಗಣ
ಸುಳ್ಯ ತಾಲೂಕು
ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಹಾಗೂ ರಾಷ್ಟ್ರೀಯ ಎ’ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿ ಇದರ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರು ಕಬಡ್ಡಿ ಫೆಡರೇಶನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿಅಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಎ’ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ ಶಿಪ್ – 2023 ಪುರುಷರ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾಟವು ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿಯ ಪ್ರಭು ಮೈದಾನದಲ್ಲಿ ನ. 17,18 ಮತ್ತು 19 ರಂದು ನಡೆಯಲಿದ್ದು ಈ ಕುರಿತು ಸಂಘಟನಾ ಸಮಿತಿಯ ಪದಾಧಿಕಾರಿಗಳು ನ.10 ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ರಾಷ್ಟ್ರೀಯ ಮಟ್ಟದ ಎ’ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟವು ಮೂರು ದಿನಗಳ ಕಾಲ ಪ್ರಭು ಮೈದಾನದಲ್ಲಿ ನಿರ್ಮಿಸಲಾದ
ಸುಸಜ್ಜಿತ ಒಳ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಪಂದ್ಯಾಟದಲ್ಲಿ ರಾಷ್ಟ್ರೀಯ ಮಟ್ಟದ 12 ಪುರುಷರ ತಂಡಗಳು ಹಾಗೂ ನಾಲ್ಕು ಮಹಿಳೆಯರ ತಂಡಗಳು ಭಾಗವಹಿಸಿ ಸೆಣಸಾಡಲಿವೆ.
ಒಳಾಂಗಣ ಕ್ರೀಡಾಂಗಣದಲ್ಲಿ
ಸುಮಾರು 3000 ಸಾವಿರ ಮಂದಿ ಕುಳಿತುಕೊಂಡು ಪಂದ್ಯಾಟವನ್ನು ವೀಕ್ಷಿಸಲು ವ್ಯವಸ್ಥಿತ ಗ್ಯಾಲರಿ ನಿರ್ಮಾಣ ಮಾಡಲಾಗಿದೆ. ಅಲ್ಲದೆ 1500 ಮಂದಿ ಕುಳಿತು ಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗುವುದು.
ಎಷ್ಟೇ ಜೋರಾಗಿ ಮಳೆ ಬಂದರೂ ಪಂದ್ಯಾಟ ನಿರಂತರವಾಗಿ ನಡೆಯಲಿದ್ದು ಆಟಗಾರರಿಗೆ ಅಥವಾ ಪ್ರೇಕ್ಷಕರಿಗೆ ಅಡಚಣೆಯಾಗಲಾರದು.
ಮೂರು ದಿನಗಳ ಕಾಲ ಪಂದ್ಯಾಟವು ಸಮಯಕ್ಕೆ ಸರಿಯಾಗಿ ಸಂಜೆ ಗಂಟೆ 5.00ಕ್ಕೆಆರಂಭಗೊಳ್ಳಲಿದ್ದು ನಿರಂತರವಾಗಿ ರಾತ್ರಿ 12 ಗಂಟೆಯ ತನಕ ಪಂದ್ಯಾಟವುನಡೆಯಲಿದೆ.
ಪ್ರತಿದಿನ ಸಂಜೆ ನಡೆಯಲಿರುವ
ಸಭಾ ಕಾರ್ಯಕ್ರಮವನ್ನು ಸೀಮಿತ ಸಮಯ ಬಳಸಿಕೊಂಡು ಅತ್ಯಂತ ಚುಟುಕಾಗಿ ನಡೆಸಿಕೊಡಲಾಗುತ್ತದೆ.
ಸಂಜೆಯಸಮಾರಂಭದಲ್ಲಿ ರಾಜ್ಯ ಹಾಗೂ ಜಿಲ್ಲೆಯ ಮತ್ತು ಸ್ಥಳೀಯ ಎಲ್ಲಾ ಪ್ರಮುಖ ಪಕ್ಷದ ನಾಯಕರುಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರದ ಸಾಧಕರು,
ಚಲನಚಿತ್ರ ನಟರು ಭಾಗವಹಿಸಲಿದ್ದಾರೆ.
ಸ್ಟೇಡಿಯಂನ ಹೊರ ಭಾಗದಲ್ಲಿ ವ್ಯವಸ್ಥಿತ ರೀತಿಯಲ್ಲಿ ಫುಡ್ ಫೆಸ್ಟಿವಲ್ ನಡೆಸಲಾಗುವುದು. ಸ್ಟೇಡಿಯಂನ ಸುತ್ತಲೂ ಫುಡ್ ಸ್ಟಾಲ್ ಹಾಕಲು ಅವಕಾಶವಿದೆ. ಈಗಾಗಲೇ ಬೇರೆ ಬೇರೆ ಕಡೆಗಳಿಂದ ಸ್ಟಾಲ್ ಅಳವಡಿಸಲು ಬೇಡಿಕೆ ಬಂದಿದೆ. ಪಂದ್ಯಾಟ ವೀಕ್ಷಿಸಲು ಬರುವ ಕ್ರೀಡಾಭಿಮಾನಿಗಳಿಗೆ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಸವಿಯುವ ಅವಕಾಶ ಸುಳ್ಯ ಕಬಡ್ಡಿ ಉತ್ಸವದಲ್ಲಿ ಇರುವುದು ಎಂದು ಸಂಘಟನಾ ಸಮಿತಿ ಸಂಚಾಲಕ ಜಿ.ಜಿ ನಾಯಕ್ ರವರು ವಿವರ ನೀಡಿದರು.
ಸುಳ್ಯದ ಇತಿಹಾಸದಲ್ಲಿ ದಾಖಲೆ ನಿರ್ಮಿಸುವ ಮಟ್ಟದಲ್ಲಿ ಕಬಡ್ಡಿ ಉತ್ಸವವನ್ನು ಎಲ್ಲರ ಸಹಕಾರದಿಂದ ಆಯೋಜಿಸಲಾಗುತ್ತಿದೆ.
ನ.17 ರಂದು ಅದ್ದೂರಿಯ ಪಂದ್ಯಾಟದ ಉದ್ಘಾಟನಾ ಸಮಾರಂಭದ ಮುಂಚಿತವಾಗಿ ಸಂಜೆ ಗಂಟೆ 4.00 ಕ್ಕೆ ರಾಷ್ಟ್ರೀಯ ಮಟ್ಟದ ಆಟಗಾರರೊಂದಿಗೆ ಆಕರ್ಷಕ ಕಾಲ್ನಡಿಗೆಯ ಜಾಥಾವು ಸುಳ್ಯದ ಮುಖ್ಯ ರಸ್ತೆಯಲ್ಲಿ ಸಾಗಿ ಬರಲಿದೆ.
ಈ ಸಂದರ್ಭದಲ್ಲಿ ಸ್ಥಳೀಯನಾಯಕರುಗಳು, ಸಂಘದಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಕ್ರೀಡಾಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.
ಈಗಾಗಲೇ ರಾಷ್ಟ್ರೀಯ ಎ.ಗ್ರೇಡ್ ತಂಡಗಳ ಆಯ್ಕೆ ಪ್ರಕ್ರಿಯೆಯು ಸಂಪೂರ್ಣಗೊಂಡು ಮುಂಗಡ ಪಾವತಿಸಿ ತಂಡಗಳನ್ನು ಕಾದಿರಿಸಲಾಗಿದೆ. ಪುರುಷರ 12 ತಂಡಗಳ ಪೈಕಿ ಬಿ.ಬಿ. ಡಿ ಹರಿಯಾಣ, ಎಸ್.ಎಸ್.ಎ ದೆಹಲಿ, ಎನ್. ಸಿ .ಆರ್ ದೆಹಲಿ, ಕೆ.ಎಂ.ಸಿ ಥಾಣೆ, ಇ.ಎಸ್.ಐ ದೆಹಲಿ, ಬ್ಯಾಂಕ್ ಆಫ್ ಬರೋಡ, ಬೆಂಗಳೂರು ಸ್ಪೋರ್ಟ್ಸ್ ಕ್ಲಬ್, ದೊರೈ ಸಿಂಗಂ ತಮಿಳುನಾಡು, ಐ.ಸಿ.ಎಫ್ ಚೆನ್ನೈ,
ಜೆ.ಕೆ ಅಕಾಡೆಮಿ ಕೇರಳ, ಹಿಮಾಚಲ ಪ್ರದೇಶ, ಗುಜರಾತ್ ಇನ್ಕಮ್ ಟ್ಯಾಕ್ಸ್ ಹಾಗೂ ಮಹಿಳೆಯರ ನಾಲ್ಕು ತಂಡಗಳಾದ ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ, ತಮಿಳುನಾಡು ತಂಡಗಳನ್ನು ಆಯ್ಕೆ ಮಾಡಲಾಗಿದೆ.
ಬಲಿಷ್ಠ ತಂಡಗಳ ಮಧ್ಯೆ ಪೈಪೋಟಿಯ ಪಂದ್ಯಾಟವು ಪ್ರತಿದಿನವೂ ನಡೆಯಲಿದ್ದು ವೀಕ್ಷಕರಿಗೆ ಕುಳಿತುಕೊಳ್ಳಲು ಗ್ಯಾಲರಿ ವ್ಯವಸ್ಥೆ ಹಾಗೂ ವಿಐಪಿ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ.
ಪಂದ್ಯಾಟವನ್ನು ವೀಕ್ಷಿಸಲು ಪ್ರವೇಶ ಶುಲ್ಕ ವಿಧಿಸಲಾಗಿದ್ದು ಗ್ಯಾಲರಿಗೆ ರೂ. 200/- ರಂತೆ ದಿನವೊಂದಕ್ಕೆ ಪಾವತಿಸಬೇಕು. ಮುಂಗಡವಾಗಿ ಟಿಕೆಟ್ ಪಡೆದುಕೊಳ್ಳಲು ಈಗಾಗಲೇ ಸುಬ್ರಹ್ಮಣ್ಯ ಕಲ್ಲುಗುಂಡಿ, ಬೆಳ್ಳಾರೆ, ಸುಳ್ಯದಲ್ಲಿ ಕಚೇರಿಯ ಕೌಂಟರ್ ತೆರೆಯಲಾಗಿದೆ. ನ. 17 ರಂದು ಉದ್ಘಾಟನಾ ಸಮಾರಂಭವು ಸಂಜೆ ಗಂಟೆ 5:00 ಕ್ಕೆ ಸರಿಯಾಗಿ ನಡೆಯಲಿರುವುದು.
ಪಂದ್ಯಾಟದ ಆಯೋಜನೆಗೆ ಸುಮಾರು 40 ಲಕ್ಷದಷ್ಟು ವೆಚ್ಚ ತಗಲುವ ಸಾಧ್ಯತೆ ಇರುವುದರಿಂದ ರೂ.100 ರ ಅದೃಷ್ಟ ಕೂಪನ್ ನ್ನು ಸಂಘದ ವತಿಯಿಂದ ಹೊರ ತರಲಾಗಿದೆ. ಬಂಪರ್ ಬಹುಮಾನವಾಗಿ ಸ್ಕೂಟಿ ಹಾಗೂ ಆಕರ್ಷಕ ಬಹುಮಾನಗಳನ್ನು ಇರಿಸಲಾಗಿದೆ.
ಅದೃಷ್ಟ ಕೂಪನ್ ಡ್ರಾವನ್ನು ನ.18 ರ ಬದಲಾಗಿ 19 ರಂದು ಪಂದ್ಯಾಟದ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ನಡೆಸಲಾಗುವುದು ಎಂದು ಪಂದ್ಯಾಟದ ಸಂಘಟನಾ ಸಮಿತಿಯ ಅಧ್ಯಕ್ಷ ಭಾರತ್ ಶಾಮಿಯಾನ ಮಾಲಕ ಸಂಶುದ್ದೀನ್ ಜಿ.ಪಿ ಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಎಸ್. ಪಿ. ಲೋಕನಾಥ್, ಅಧ್ಯಕ್ಷ ಪ್ರಕಾಶ್ ಲೈಟಿಂಗ್ಸ್ ಮಾಲಕ ಶಿವಪ್ರಕಾಶ್ ಸುಳ್ಯ ನ.ಪಂ. ಮಾಜಿ ಸದಸ್ಯ ಗೋಕುಲ್ ದಾಸ್ ಸುಳ್ಯ, ಉದ್ಯಮಿ ಅಬ್ದುಲ್ ಮಜೀದ್ ಜನತಾ, ಖಜಾಂಜಿ ಜಿ.ಎ ಮುಹಮ್ಮದ್ ಸಹನ ಸುಳ್ಯ, ಸಂಘಟನಾ ಸಮಿತಿಯ ಸಂಯೋಜಕ ರಾಜೇಶ್ ಎನ್.ಎಸ್ ಸುಬ್ರಹ್ಮಣ್ಯ, ಉಪಾಧ್ಯಕ್ಷ ಶಾಫಿ ಪ್ರಗತಿ ಪೈಚಾರು, ಕಾರ್ಯದರ್ಶಿ ಗುರುದತ್ ನಾಯಕ್, ಜತೆ ಖಜಾಂಜಿ ಅಬ್ದುಲ್ ರಜಾಕ್ ಸ್ವಾಗತ್, ವೆಂಕಟರಮಣ, ಮಧುಕುಮಾರ್ ನಾಯರ್, ವಿನೋದ್ ಕಲ್ಲಪಳ್ಳಿ, ಸುನಿಲ್ ಎನ್. ಎಸ್, ಜಯಂತ ಮಂಡೆಕೋಲು ಉಪಸ್ಥಿತರಿದ್ದರು.