ದೀಪಾವಳಿ… ಸದಾ ಬೆಳಗುತ್ತಾ ಇರುವ ದೀಪದ‌ ಹಾಗೆ

0

✍️..ಕು.ನಿರೀಕ್ಷಾ ಸುಲಾಯ

ಬೆಳಕಿನ ‌ಹಬ್ಬ ದೀಪಾವಳಿ
ಶುರುವಾಗಲಿ ನಮ್ಮ ಹಾವಳಿ
ಸಂತೋಷದಿಂದ ಪ್ರತಿ ಕ್ಷಣ
ಸಂಭ್ರಮದಿಂದ ಕೂಡಿದ ಮನ

ಶುರುವಾಯಿತು ಪಟಾಕಿಗಳ ಸುರಿಮಳೆ
ಹೆಚ್ಚಾಗಲಿ ನಮ್ಮ ಕರಾವಳಿಯ ಕಲೆ
ಬೆಳಕಿನೆಡೆಗೆ ನಡೆಯುವ ನಾವು
ದು:ಖಪಡದೆ ಪ್ರತೀ ನಿಮಿಷವು

ಎಲ್ಲಾ ಕುಟುಂಬಗಳೂ ಸೇರುವ ದಿನ
ಉತ್ಸಾಹದಿಂದ ಕೂಡಿದ‌ ನಮ್ಮ ದಿನ
ಮನೆಯ ಮುಂದೆ ದೀಪಗಳ ಸಾಲು
ಖುಷಿಯಿಂದ ಕೂಡಿದ ತನು-ಮನಗಳು

ವರ್ಷದಲ್ಲಿ ಒಂದು ಸಲ ಬರುವ ಹಬ್ಬ ತಿಂಡಿ-ತಿನಿಸುಗಳಿಗೆ ಆಗುವುದು ಡಬ್ಬ
ಎಲ್ಲರ ಜೀವನವು ಬೆಳಗಲಿ‌ ಹೀಗೆ
ಸದಾ ಬೆಳಗುತ್ತಾ ಇರುವ ದೀಪದ‌ ಹಾಗೆ

-ಕು.ನಿರೀಕ್ಷಾ ಸುಲಾಯ ಎಂ
9 ನೇ ತರಗತಿ
ರೋಟರಿ‌ ವಿದ್ಯಾಸಂಸ್ಥೆ ಸುಳ್ಯ