ತುಂಡಾದ ತಡೆ ಬೇಲಿಯ ಕೀಲಿಗಳು ಚುಚ್ಚಿ ವಾಹನಗಳ ಟೈಯರ್ ಪಂಚರ್
ಸುಳ್ಯ ನಗರದ ಮುಖ್ಯರಸ್ತೆಯ ಫುಟ್ಬಾತಿಗೆ ಅಳವಡಿಸಲಾಗಿರುವ ತಡೆ ಬೇಲಿ ಇದೀಗ ವಾಹನ ಸವಾರರಿಗೆ ಕಿರಿಕಿರಿಯನ್ನು ತಂದೊಡ್ಡಿದೆ. ನಗರದ ಹಲವಾರು ಕಡೆಗಳಲ್ಲಿ ತಡೆ ಬೇಲಿಗಳು ತುಂಡಾಗಿ ಕೆಳಭಾಗದಲ್ಲಿ ಅವಶೇಷಗಳು ಮಾತ್ರ ಬಾಕಿ ಆಗಿರುವ ಪರಿಸ್ಥಿತಿಗೆ ಬಂದಿದೆ.
ಇದೀಗ ಈ ಭಾಗದಲ್ಲಿ ವಾಹನ ಸವಾರರು ತಮ್ಮ ವಾಹನಗಳನ್ನು ಪಾರ್ಕ್ ಮಾಡುವ ಸಂದರ್ಭ ಈ ಕೀಲಿಗಳ ಮೇಲೆ ವಾಹನದ ಚಕ್ರ ನಿಂತಾಗ ಮೊಣಚು ಭಾಗ ಟಯರಿಗೆ ಚುಚ್ಚಿ ಟಯರ್ ಪಂಚರ್ ಆಗುತ್ತಿರುವ ಘಟನೆ ಸಂಭವಿಸುತ್ತಿದೆ.
ಇದೇ ರೀತಿಯ ಘಟನೆ ಇಂದು ಬೆಳಿಗ್ಗೆ ಸುಳ್ಯ ಗಾಂಧಿನಗರ ಮಸೀದಿ ಬಳಿ ನಡೆದಿದ್ದು ಓರ್ವ ಕಾರಿನ ಚಾಲಕರು ವಿನಾಕಾರಣ ಸಮಸ್ಯೆ ಎದುರಿಸಬೇಕಾಯಿತು.
ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಈ ಭಾಗದ ವ್ಯಾಪಾರಸ್ಥರು, ಸಾರ್ವಜನಿಕರು ಆಗ್ರಹಿಸಿದ್ದಾರೆ.