ಅಮರ ಪಡ್ನೂರು: ಸುಳುಗೋಡಿನಲ್ಲಿ ಬರೆಗೆ ಗುದ್ದಿದ ಕಾರು

0

ಅಮರ ಪಡ್ನೂರು ಗ್ರಾಮದ ಶೇಣಿ ಬಳಿಯ ಸುಳುಗೋಡು ಎಂಬಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಬರೆಗೆ ಗುದ್ದಿದ ಘಟನೆ ಜ.22 ರ ಸಂಜೆ ವರದಿಯಾಗಿದೆ.

ನಾರಾಯಣ ಎಂಬವರ ಕಾರು ಬರೆಗೆ ಗುದ್ದಿ ಕಾರು ನಜ್ಜುಗುಜ್ಜಾಗಿದೆ. ಕಾರು ಚಾಲಕರಿಗೆ ಯಾವುದೇ ತೊಂದರೆ ಉಂಟಾಗಿಲ್ಲ.
ಸ್ಥಳೀಯರ ಸಹಕಾರದಿಂದ ಕಾರನ್ನು ಸ್ಥಳದಿಂದ ಮೆಲಕ್ಕೆತ್ತಲಾಗಿರುವುದಾಗಿ ವರದಿಯಾಗಿದೆ.