ಮಂಡೆಕೋಲು ಗ್ರಂಥಾಲಯ ಸಪ್ತಾಹಕ್ಕೆ ಚಾಲನೆ

0

ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಗ್ರಂಥಾಲಯ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಖ್ಯಾತ ವೈದ್ಯ ಕಾಸರಗೋಡು ನರ್ಸಿಂಗ್ ಹೋಮ್ ಆಸ್ಪತ್ರೆಯ ಪಾಲುದಾರರೂ ಆದ ಡಾ. ಪದ್ಮನಾಭ ಭಟ್ ಎರ್ಕಲ್ಪಾಡಿ ದೀಪ ಪ್ರಜ್ವಲನ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರತಿಮಾ ಹೆಬ್ಬಾರ್, ಶುಭಹಾರೈಸಿದರು ನರೇಗಾ ಇಂಜಿನಿಯರ್ ರಶ್ಮಿ ,ಹಿರಿಯರಾದ ಚೋಯಪ್ಪ ಮಣಿಯಾಣಿ, ಕಂದಾಯ ಇಲಾಖೆ ಸಿಬ್ಬಂದಿ ರಾಧಾಕೃಷ್ಣ ಕನ್ಯಾನ, ಸಮುದಾಯ ಆರೋಗ್ಯ ಅಧಿಕಾರಿ ಪವಿತ್ರ, ಅಂಚೆ ಪಾಲಕಿ‌ ಚೈತ್ರಾ ಪೇರಾಲು, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ನೀಮಾ ದೇವರಗುಂಡ ,ಮೋಹಿತ್ ಪೇರಾಲ್ , ಗ್ರಾಮ ಪುನರ್ವಸತಿ ಕಾರ್ಯಕರ್ತೆ ಸವಿತಾ ಉಪಸ್ಥಿತರಿದ್ದರು.

ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ಕಾರ್ಯಕ್ರಮ ನಿರೂಪಿಸಿದರು.