ಕೊಡಿಯಾಲ ಭಾರೀ ಮಳೆಗೆ ಮುಖ್ಯ ರಸ್ತೆಯ ಮೋರಿ ಕುಸಿತ

0

ಕೊಡಿಯಾಲ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಮುಖ್ತರಸ್ತೆಯ ಮೋರಿ ಒಂದು ಬದಿ ಜರಿದು ಬಿದ್ದಿದೆ. ಆರ್ವಾರ ಎಂಬಲ್ಲಿ ಗುಡ್ಡದಿಂದ ಬರುವ ಮಳೆ ನೀರಿಗೆ ಮುಖ್ಯ ರಸ್ತೆಯಲ್ಲಿ ಮೋರಿ ಅಳವಡಿಸಿದ್ದು ಇತ್ತೀಚೆಗೆ ಸುರಿದ ಭಾರೀ ಮಳೆಗೆ ಮೋರಿಯ ಒಂದು ಬದಿ ಹಾಗೂ ಡಾಮರು ರಸ್ತೆಯೂ ಜರಿದು ಬಿದ್ದಿದೆ. ಇನ್ನೂ ಹೆಚ್ಚು ರಸ್ತೆ ಜರಿದು ಬಿದ್ದಿದ್ದರೆ ಕೊಡಿಯಾಲಕ್ಕೆ ರಸ್ತೆ ಸಂಪರ್ಕವೇ ಕಡಿತಗೊಳ್ಳುತ್ತಿತ್ತು. ಈಗ ಮೋರಿಯ ದುರಸ್ಥಿ ಕಾರ್ಯ ನಡೆಯುತ್ತಿದೆ.