ಬೆಳ್ಳಾರೆ ಮುಖ್ಯಪೇಟೆಯಲ್ಲಿ ಆಡುಗಳು ಓಡಾಡುತ್ತಿದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ದ್ವಿಚಕ್ರ ವಾಹನದವರು ರಸ್ತೆಯಲ್ಲಿ ಸಂಚರಿಸುವಾಗ ಆಡುಗಳು ಅಡ್ಡಬದ್ದು ಬೈಕ್ ಗಳು ಬಿದ್ದ ಘಟನೆಗಳು ಕೂಡಾ ಇತ್ತೀಚೆಗೆ ನಡೆದಿದೆ.
ಕೆಲವರ್ಷಗಳ ಹಿಂದೆ ಮಾಸ್ತಿಕಟ್ಟೆಯಲ್ಲಿ ದ್ವಿಚಕ್ರ ವಾಹನಕ್ಕೆ ಆಡು ಅಡ್ಡಬಂದು ಸವಾರ ರಸ್ತೆಗೆ ಬಿದ್ದು ತೀವ್ರಗಾಯಗೊಂಡು ಆಸ್ಪತ್ರೆ ಯಲ್ಲಿ ಮೃತಪಟ್ಟ ಘಟನೆಯೂ ನಡೆದಿದೆ.
ಈ ಬಗ್ಗೆ ಹಲವು ಬಾರಿ ವರದಿಗಳು ಬಂದರೂ ಇಲಾಖೆ ಯಾವುದೇ ಕ್ರಮಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.