ಉತ್ತಮ ಶಿಕ್ಷಣದಿಂದ ಸದೃಢ ಭಾರತ ನಿರ್ಮಾಣ – ಭಾಗೀರಥಿ ಮುರುಳ್ಯ
ಐವರ್ನಾಡು ಗ್ರಾಮದ ದೇರಾಜೆಯಲ್ಲಿ ನೂತನವಾಗಿ ನಿರ್ಮಾಣವಾದ ಅಂಗನವಾಡಿ ಕೇಂದ್ರವು ನ.26 ರಂದು ಉದ್ಘಾಟನೆಗೊಂಡಿತು.
ಶಾಸಕಿ ಭಾಗೀರಥಿ ಮುರುಳ್ಯ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಬಳಿಕ ನಡೆದ ಸಭಾಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ದೇರಾಜೆಯಲ್ಲಿ ಉತ್ತಮ ಅಂಗನವಾಡಿ ಕೇಂದ್ರ ನಿರ್ಮಾಣವಾಗಿದೆ. ಇಲ್ಲಿ
ಮಕ್ಕಳು ಒಳ್ಳೆಯ ಶಿಕ್ಷಣವನ್ನು ಪಡೆದು ಸದೃಢ ಭಾರತ ನಿರ್ಮಾಣ ಮಾಡುವಂತಾಗಲಿ ಎಂದು ಹೇಳಿದರು.
ಸನ್ಮಾನ
ಅಂಗನವಾಡಿ ಕೇಂದ್ರವನ್ನು ಸುಂದರವಾಗಿ ನಿರ್ಮಾಣ ಮಾಡಿದ ಕಾಂಟ್ರಾಕ್ಟರ್ ದಿನೇಶ್ ಉಳುವಾರುರವರನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಿಡಿಪಿಒ ಶೈಲಜಾ,ಸಮಾಜ ಕಲ್ಯಾಣಾಧಿಕಾರಿ ಉಮಾದೇವಿ, ಐವರ್ನಾಡು ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ಉಷಾ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ,ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ ,ಸದಸ್ಯರಾದ ದೇವಿಪ್ರಸಾದ್ ಕೊಪ್ಪತ್ತಡ್ಕ,ನಳಿನಿ ಕೋಡ್ತೀಲು,ಸುಜಾತ ಪವಿತ್ರಮಜಲು,ದೇರಾಜೆ ಗೆಳೆಯರ ಬಳಗದ ಅಧ್ಯಕ್ಷ ಅರುಣ್ ಗುತ್ತಿಗಾರುಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಅಜಿತ್ ದೇರಾಜೆ ಕಾರ್ಯಕ್ರಮ ನಿರೂಪಿಸಿ,ಶ್ರೀಮತಿ ಉಷಾ ವಂದಿಸಿದರು.
ಅಂಗನವಾಡಿ ಶಿಕ್ಷಕಿ ವಿಜಯಲಕ್ಷ್ಮೀ ಹಾಗೂ ವಿದ್ಯಾರ್ಥಿಗಳು ಪೋಷಕರು ಸಹಕರಿಸಿದರು.