ಕೊಡಗು ಸಂಪಾಜೆ: ಡಿ.ಸಿ.ಸಿ.ಬ್ಯಾಂಕಿನಲ್ಲಿ ಸಾಲ -ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಾಗಾರ

0

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಸಂಪಾಜೆ ಶಾಖೆಯಲ್ಲಿ ಗ್ರಾಹಕರಿಗೆ ಸಾಲ – ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಾಗಾರವು ನ.24ರಂದು ಜರುಗಿತು.

ಸಂಘದ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಅವರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವತಿಯಿಂದ ಗ್ರಾಹಕರಿಗೆ ದೊರಕುವ ವಿವಿಧ ಸಾಲ – ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.


ಬ್ಯಾಂಕಿನ ವತಿಯಿಂದ ಗ್ರಾಹಕರಿಗೆ ಅಲ್ಪಾವಧಿ ಸಾಲ, ಮಧ್ಯಮಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲ, 2023- 24ನೇ ಸಾಲಿನ ರಾಜ್ಯ ಸರ್ಕಾರದ ಬಡ್ಡಿ ರಿಯಾಯಿತಿ ಬದ್ಧತೆಯ ನೂತನ ಯೋಜನೆಗಳು, ಅಲ್ಪಾವಧಿ ಕೃಷಿಯೇತರ ಸಾಲಗಳು, ತ್ರೈಮಾಸಿಕ ಕೃಷಿಯೇತರ ಸಾಲಗಳು, ದೀರ್ಘಾವಧಿ ಕೃಷಿಯೇತರ ಸಾಲಗಳು, ಮನೆ ನಿರ್ಮಾಣ ಸಾಲ, ಕೃಷಿ ಸ್ತಿರಾಸ್ತಿ ಅಡಮಾನ ಆಧಾರಿತ ಇತರೆ ಉದ್ಧೇಶಿತ ಸಾಲಗಳು, ಸ್ತಿರಾಸ್ತಿ ಖರೀದಿ ಸಾಲ, ದೇಶ ಮತ್ತು ವಿದೇಶಗಳಲ್ಲಿ ಮಕ್ಕಳ ವ್ಯಾಸಂಗಕ್ಕಾಗಿ ವಿದ್ಯಾ ಸಹಕಾರ ಹೆಸರಿನ ವಿದ್ಯಾಭ್ಯಾಸ ಸಾಲ ಯೋಜನೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ (ಎನ್.ಆರ್.ಎಲ್‌.ಎಂ.) ಬಡ್ಡಿ ರಿಯಾಯಿತಿ ಬದ್ಧತೆಯಡಿ ಸ್ವಸಹಾಯ ಗುಂಪುಗಳಿಗೆ ಮಾಸಿಕ ಮರುಪಾವತಿ ಬದ್ಧತೆಯಡಿ ಗರಿಷ್ಠ ರೂ‌.10 ಲಕ್ಷದವರೆಗಿನ ಸಾಲ ಸೌಲಭ್ಯಗಳು ಕೊಡಗು ಡಿ.ಸಿ.ಸಿ. ಬ್ಯಾಂಕಿನ ವತಿಯಿಂದ ಲಭ್ಯವಿದೆ.