ಪೆರುವಾಜೆ : ಜಾತ್ರೋತ್ಸವ,ರಥ ಸಮರ್ಪಣೆ ಬಗ್ಗೆ ಪೂರ್ವಭಾವಿ ಸಭೆ

0

ಡಿ.14 ರಂದು ಜಾತ್ರೋತ್ಸವಕ್ಕೆ ಚಪ್ಪರ ಮುಹೂರ್ತ

ಜ.16 : ಬ್ರಹ್ಮರಥ ಸಮರ್ಪಣೆ ಜ.19 : ಬ್ರಹ್ಮರಥೋತ್ಸವ

ಇತಿಹಾಸ ಪ್ರಸಿದ್ಧ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಜಾತ್ರೋತ್ಸವದ ಬಗ್ಗೆ ಪೂರ್ವಭಾವಿ ಸಭೆಯು ನ.26 ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.


ಕ್ಷೇತ್ರದ ತಂತ್ರಿಗಳಾದ ಕಾರ್ತಿಕ್ ತಂತ್ರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಯಿತು.
ಪ್ರತಿ ವರ್ಷದಂತೆ ಜ.16 ರಂದು ಜಾತ್ರೋತ್ಸವ ಪ್ರಾರಂಭಗೊಳ್ಳಲಿದೆ.
ಡಿ.14 ರಂದು ಜಾತ್ರೋತ್ಸವಕ್ಕೆ ಚಪ್ಪರ ಮುಹೂರ್ತ ನಡೆಯಲಿದೆ.
ದೇವಸ್ಥಾನದಲ್ಲಿ ನೂತನ ರಥ ನಿರ್ಮಾಣ ಕೆಲಸ ಭರದಿಂದ ನಡೆಯುತ್ತಿದ್ದು ಶ್ರೀ ದೇವಿಗೆ ರಥ ಸಮರ್ಪಣೆಯು ಜ.16. ರಂದು ನಡೆಯಲಿದೆ.


ಶತವರ್ಷಗಳ ಬಳಿಕ ಈ ಬಾರಿ ಶ್ರೀ ದೇವಿಗೆ ರಥೋತ್ಸವವು ಜ.19 ರಂದು ನಡೆಯಲಿದೆ.
ಜ.15 ಮತ್ತು ಜ.16 ರಂದು ರಥೋತ್ಸವಕ್ಕೆ ಸಂಬಂಧಪಟ್ಟು ವೈದಿಕ ಕಾರ್ಯಕ್ರಮಗಳು ನಡೆಯಲಿದೆ.ರಾತ್ರಿ ಉದ್ಭವ ಗಣಪತಿಗೆ ಮೂಡಪ್ಪ ಸೇವೆ,ಉದ್ಭವ ಶ್ರೀ ಜಲದುರ್ಗಾದೇವಿಗೆ ದೊಡ್ಡ ರಂಗಪೂಜೆ ನಡೆಯಲಿದೆ.
ಜ.16 ಕ್ಕೆ ಬೆಳಿಗ್ಗೆ ಮಹಾಗಣಪತಿ ಹೋಮ,ಬ್ರಹ್ಮರಥ ಶುದ್ಧಿ ಕಲಶ,ಶ್ರೀ ದೇವರಿಗೆ ಬ್ರಹ್ಮರಥ ಸಮರ್ಪಣೆ,ಪಲ್ಲಕ್ಕಿ ಸಮರ್ಪಣೆ ನಡೆಯಲಿದೆ ಎಂದು ಕೆಮ್ಮಿಂಜೆ ಕಾರ್ತಿಕ್ ತಂತ್ರಿಗಳು ಮಾಹಿತಿ ನೀಡಿದರು.
ಜಾತ್ರೋತ್ಸವವನ್ನು ಈ ಬಾರಿ ಬಹಳ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಯಿತು.
ಆಮಂತ್ರಣ ಮುದ್ರಣ,ವೈದಿಕ ಕಾರ್ಯಕ್ರಮ,ಸಾಂಸ್ಕೃತಿಕ ಕಾರ್ಯಕ್ರಮಗಳು,ದೇವಸ್ಥಾನದ ಅಲಂಕಾರ ವ್ಯವಸ್ಥೆ ,ಭೋಜನದ ವ್ಯವಸ್ಥೆ,ಪಾರ್ಕಿಂಗ್ ವ್ಯವಸ್ಥೆ ಹಾಗೂ ಇತರ ವ್ಯವಸ್ಥೆಗಳ ಬಗ್ಗೆ ಚರ್ಚೆಗಳು ನಡೆಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಅಮರನಾಥ ಶೆಟ್ಟಿ ಪೆರುವಾಜೆಗುತ್ತು, ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ,ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ವ್ಯ.ಸ.ಮಾಜಿ ಅಧ್ಯಕ್ಷ ಉಮೇಶ್ ಕೆ.ಎಂ.ಬಿ ವೇದಿಕೆಯಲ್ಲಿದ್ದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು,ಗ್ರಾಮಸ್ಥರು ಹಾಗೂ ಭಕ್ತಾದಿಗಳು ಸಭೆಯಲ್ಲಿ ಉಪಸ್ಥಿತರಿದ್ದು ಸಲಹೆ,ಸೂಚನೆಗಳನ್ನು ನೀಡಿದರು.
ಪದ್ಮನಾಭ ನೆಟ್ಟಾರು ಸ್ವಾಗತಿಸಿ,ವ್ಯ.ಸ.ಸದಸ್ಯ ನಾರಾಯಣ ಕೊಂಡೆಪ್ಪಾಡಿ ವಂದಿಸಿದರು.