ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಬಿಡುಗಡೆ
ಕೇರ್ಪಡ ಶ್ರೀ ಮಹೀಷಮರ್ದಿನಿ ದೇವಸ್ಥಾನ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಜ. 1 ರಿಂದ ಜ. 7 ರವರೆಗೆ ನಡೆಯಲಿದ್ದು ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದಲ್ಲಿ
ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಡಿ.15 ರಂದು ಬಿಡುಗಡೆಗೊಳಿಸಿದರು.
ಬಳಿಕ ಕೇರ್ಪಡ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದ ಶ್ರೀಹರಿ ಕುಂಜುರಾಯ ಮತ್ತು ಪ್ರಶಾಂತ್ ಪರ್ಲತ್ತಾಯರ ವೈದಿಕ ಕಾರ್ಯಕ್ರಮ ಪ್ರಾರ್ಥನೆಯ ಬಳಿಕ ಪ್ರಥಮವಾಗಿ ಬ್ರಹ್ಮಕಲಶೋತ್ಸವವು ಸಂಚಾಲಕ ಶಿವಾನಂದ ಬೋಳ್ಕ ಜೆಯವರಿಗೆ ಆಮಂತ್ರಣ ನೀಡಲಾಯಿತು.
ಅವರು ದೇಣಿಗೆ ರೂಪವಾಗಿ 25,000 ನೀಡಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ಸದಸ್ಯರಾದ ವೆಂಕಪ್ಪ ಗೌಡ ಆಲಾಜೆ, ರೂಪರಾಜ ರೈ, ಭಾಗ್ಯ ಪ್ರಸನ್ನ, ಯೋಗಾನಂದ ಉಳ್ಳಲಾಡಿ ,ರಘುನಾಥ್ ಎಂಜಿರ್, ವಾರಿಜಾಕ್ಷಿ ಕೆ. ವಿ, ಪ್ರಧಾನ ಕಾರ್ಯದರ್ಶಿ ಅನೂಪ್ ಕುಮಾರ್ ಆಳ್ವ, ಶ್ರೀಮತಿ ಲೀಲಾವತಿ ಮಿಲ್ಕ್ ಮಾಸ್ಟರ್, ಮುರುಳ್ಯ – ಎಣ್ಮೂರು ಸೊಸೈಟಿ ಅಧ್ಯಕ್ಷೆ ಶ್ರೀಮತಿ ಕುಸುಮಾವತಿ ಕೆ ಜಿ, ಉಮೇಶ್ ಅಲೆಂಗಾರ, ಗಂಗಾಧರ ಪಂಡಿತ್, ಧರ್ಮಪಾಲ ಅನ್ನೋವು, ಗುಣಾವತಿ ನಾವೂರು, ಅವಿನಾಶ್ ದೇವರ ಮಜಲು, ಸಚಿನ್ ಆರೆಂಬಿ, ಜಾನಕಿ ಮುರುಳ್ಯ, ಸುಂದರ ಗೌಡ ಆರೆಂಬಿ, ನಾರಾಯಣ ಎಂಜೀರ್, ರಾಮಚಂದ್ರ ಕೊಠರ, ಪದ್ಮನಾಭ ಪೂಜಾರಿ ಮನೆ, ಲೋಲಾಕ್ಷಿ ಕರಿಂಬಿಲ, ತಾರಾನಾಥ ಕರಿಂಬಿಲ, ಧ್ರುವ ಕುಮಾರ್ ಕೇರ್ಪಡ, ಸೆಲೀನ್ ಕುಮಾರ್ ಅಲೆಕ್ಕಾಡಿ, ಸುಹಾಸ್ ಅಲೆಕ್ಕಾಡಿ, ರಾಮಚಂದ್ರ ಪೂಜಾರಿ, ದೀಪಕ್ ರೈ ಎಣ್ಮೂರು, ಸಿಬ್ಬಂದಿ ವರ್ಗ ಮೊದಲಾದವರು ಉಪಸ್ಥಿತರಿದ್ದರು.
ವರದಿ : ಸಂಕಪ್ಪ ಸಾಲ್ಯಾನ್