ಕಳಂಜ ಗ್ರಾಮದ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಡಿ. 17ರಿಂದ ಡಿ. 21ರ ತನಕ ಜರಗಲಿದೆ. ಡಿ. 17ರಂದು ರಾತ್ರಿ ಪಂಚಮಿ ಕಾರ್ಯಕ್ರಮಗಳು ನಡೆಯಿತು.
ಸಂಜೆ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಡಿ. 18ರಂದು ಷಷ್ಠಿ ಮಹೋತ್ಸವ ಪ್ರಯುಕ್ತ ಬೆಳಿಗ್ಗೆಯಿಂದ ವಿವಿಧ ವೈದಿಕ ಕಾರ್ಯಕ್ರಮಗಳು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ತಾಯಂಬಕಂ, ನೇರಳತ್ತಾಯ ದೈವದ ಭಂಡಾರ ತೆಗೆದು, ಮಹಾಪೂಜೆ, ಬಲಿ ಉತ್ಸವ ನಡೆಯಿತು. ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ನೇರಳತ್ತಾಯ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ. ಡಿ. 19ರಂದು ಬೆಳಿಗ್ಗೆ 10.00 ರಿಂದ ರಕ್ತೇಶ್ವರಿ ದೈವದ ತಂಬಿಲ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಮಹಾಪೂಜೆ, ರಂಗಪೂಜೆ ಬಳಿಕ ರಕ್ತೇಶ್ವರಿ ಮತ್ತು ಪರಿವಾರ ದೈವಗಳಿಗಳ ನೇಮೋತ್ಸವ ನಡೆಯಲಿದೆ. ಡಿ. 20ರಂದು ರಾತ್ರಿ ಮಹಾಪೂಜೆ, ಉಳ್ಳಾಕುಳು, ಚಾಮುಂಡಿ ದೈವಗಳಿಗಳ ನೇಮೋತ್ಸವ ನಡೆಯಲಿದೆ. ಡಿ. 21ರಂದು ಬೆಳಿಗ್ಗೆ 8.30ರಿಂದ ಚಾಮುಂಡಿ ದೈವ, ಗಣಗಳ ನೇಮೋತ್ಸವ ನಡೆದು, ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ಜರಗಲಿದೆ. ಡಿ. 18ರಂದು ಮಧ್ಯಾಹ್ನ ಶ್ರೀ ಮಹಾವಿಷ್ಣು ಭಜನಾ ಮಂಡಳಿ ಕಳಂಜ ಇವರಿಂದ ಭಜನಾ ಕಾರ್ಯಕ್ರಮದ ಬಳಿಕ ಸಾನ್ವಿ ತಂಟೆಪ್ಪಾಡಿಯವರಿಂದ ಯೋಗ ಪ್ರದರ್ಶನ ನಡೆಯಿತು.
ರಾತ್ರಿ ಶ್ರೀ ರಾಮ ಭಜನಾ ಮಂಡಳಿ ಕಿಲಂಗೋಡಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಡಿ. 19ರಂದು ರಾತ್ರಿ ಶ್ರೀ ಮಂಜುನಾಥ ಭಜನಾ ಮಂಡಳಿ ಕೋಟೆಮುಂಡುಗಾರು ಇವರಿಂದ ಭಜನಾ ಕಾರ್ಯಕ್ರಮ, ಡಿ. 20ರಂದು ರಾತ್ರಿ 7.00ರಿಂದ ಶ್ರೀ ಮಂಜುನಾಥೇಶ್ವರ ಜಾನಪದ ಕಲಾ ಸಂಘ ಬಾಳಿಲ ಇವರಿಂದ ಜಾನಪದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ.