ನಾಲ್ಕು ಆಡುಗಳು ವಶಕ್ಕೆ ದಂಡ ಪಾವತಿಸದಿದ್ದರೆ ಬಹಿರಂಗ ಹರಾಜು ನಡೆಸಲು ತೀರ್ಮಾನ
ಅರಂತೋಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕರು ಸಾಕುಪ್ರಾಣಿಗಳನ್ನು ಬಿಟ್ಟಿದ್ದರಿಂದ ಗ್ರಾ.ಪಂ. ವತಿಯಿಂದ ಸಾರ್ವಜನಿಕ ಪ್ರದೇಶದಲ್ಲಿ ಕಂಡುಬಂದ ನಾಲ್ಕು ಆಡುಗಳನ್ನು ವಶ ಪಡೆದು ದಂಡ ವಿಧಿಸಿದ್ದು, ದಂಡ ಪಾವತಿಸದೇ ಹೋದಲ್ಲಿ ಬಹಿರಂಗ ಹರಾಜು ನಡೆಸಲು ತೀರ್ಮಾನಿಸಿರುವ ಘಟನೆ ವರದಿಯಾಗಿದೆ.
ಅರಂತೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕ ಪ್ರದೇಶದಲ್ಲಿ ಸಾಕುಪ್ರಾಣಿಗಳನ್ನು ಬಿಟ್ಟರೆ ದಂಡ ವಿಧಿಸಲಾಗುವುದು, ಮತ್ತು ಅವುಗಳನ್ನು ಗ್ರಾ.ಪಂ. ವಶಕ್ಕೆ ಪಡೆದು ಬಹಿರಂಗ ಹರಾಜು ನಡೆಸಲಾಗುವುದು ಎಂದು ಗ್ರಾ.ಪಂ. ವತಿಯಿಂದ ಈಗಾಗಲೇ ಪ್ರಕಟಣೆಯಲ್ಲಿ ತಿಳಿಸಿದ್ದು, ಇದೀಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾರೆಮಜಲು ಪರಿಸರದಲ್ಲಿ ನಾಲ್ಕು ಆಡುಗಳು ಸಾರ್ವಜನಿಕ ಪ್ರದೇಶದಲ್ಲಿ ಸ್ಥಳೀಯರ ಕೃಷಿ ನಾಶಗೊಳಿಸಿರುವುದು ಕಂಡುಬಂದಿದ್ದು, ಆ ಆಡುಗಳನ್ನು ಮೋಹನ್ ಪಿ.ವಿ. ಅವರು ವಶಕ್ಕೆ ಪಡೆದಿದ್ದು, ಆಡಿನ ಮಾಲಕರು ಗ್ರಾ.ಪಂ. ಗೆ ಬಂದು ದಂಡ ಪಾವತಿಸುವಂತೆ ವಿನಂತಿಸಲಾಗಿದೆ. ತಪ್ಪಿದ್ದಲ್ಲಿ ಆಡುಗಳನ್ನು ಬಹಿರಂಗವಾಗಿ ಹರಾಜು ನಡೆಸಿ, ವಿಲೇವಾರಿ ಮಾಡಲಾಗುವುದು ಎಂದು ಗ್ರಾ.ಪಂ. ವತಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.