ಕೋಲ್ಚಾರು ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ ಕಾರ್ಯಕ್ರಮ- ಟೈಲರಿಂಗ್ ಘಟಕ ಉದ್ಘಾಟನೆ

0

ಆಲೆಟ್ಟಿ ಗ್ರಾಮದ ಕೋಲ್ಚಾರು ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ ಕಾರ್ಯಕ್ರಮವು ಡಿ.19 ರಂದು ಕೋಲ್ಚಾರು ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ವೀಣಾ ವಸಂತ ಆಲೆಟ್ಟಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಪವಿತ್ರ ಪಾಲಾರು ಅಧ್ಯಕ್ಷತೆ ವಹಿಸಿದ್ದರು.
ಆಲೆಟ್ಟಿ ಪಂ. ಸದಸ್ಯ ದಿನೇಶ್ ಕಣಕ್ಕೂರು, ಶಂಕರಿ ಕೊಲ್ಲರಮೂಲೆ, ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ಸುದರ್ಶನ
ಪಾತಿಕಲ್ಲು, ಪಂ. ಮಾಜಿ ಸದಸ್ಯ ಸೀತಾರಾಮ ಕೋಲ್ಲರಮೂಲೆ,
ನಿವೃತ್ತ ಶಿಕ್ಷಕಿ ನಾಗವೇಣಿ ಕೊಯಿಂಗಾಜೆ ವೇದಿಕೆಯಲ್ಲಿದ್ದರು.

ಸಿ .ಡಿ. ಪಿ. ಒ ಶೈಲಜಾ ರವರು ಇಲಾಖೆಯಿಂದ ಮಹಿಳೆಯರಿಗೆ ಸಿಗುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಮೇಲ್ವಿಚಾರಕಿ ದೀಪಿಕಾ ರವರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ವಿಜೇತ ಮಕ್ಕಳಿಗೆ ವಿನುತಾ ಧನಂಜಯ ಗೌಡ ಕೋಲ್ಚಾರು ಬಹುಮಾನ ವಿತರಿಸಿದರು.


ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರಕ್ಕೆ ಡಾ| ಮಹಮ್ಮದ್ ಕುಂಞ ಕುಂಭಕೋಡು ರವರು ಟಿ.ವಿ ಯನ್ನು ಕೊಡುಗೆಯಾಗಿ ನೀಡಿದರು.
ಅಮೃತ ಬೀಜ ಧನ ಯೋಜನೆಯಡಿಯಲ್ಲಿ ಮಹಿಳಾ ನಿಗಮದಿಂದ ಪ್ರಜ್ವಲ್ ಸ್ತ್ರೀ ಶಕ್ತಿ ಸಂಘಕ್ಕೆ ಬಂದಿರುವ 1 ಲಕ್ಷ ಸಹಾಯಧನದಲ್ಲಿ ಕೋಲ್ಚಾರಿನಲ್ಲಿ ಟೈಲರಿಂಗ್ ಘಟಕವನ್ನು ತೆರೆಯಲಾಗಿದ್ದು ಸಿ.ಡಿ.ಪಿ.ಒಉದ್ಘಾಟಿಸಿದರು. ಆಹಾರ ತಯಾರಿಕಾ ಘಟಕ ಸ್ಥಾಪಿಸಲು
ಪಲ್ಲವಿ ಸ್ತ್ರೀಶಕ್ತಿ ಸಂಘಕ್ಕೆ 1 ಲಕ್ಷ ಪ್ರೋತ್ಸಾಹ ಧನ ಲಭಿಸಿರುವ ಘಟಕವನ್ನು ಈ ಸಂದರ್ಭದಲ್ಲಿ ಪರಿಶೀಲಿಸಲಾಯಿತು.


ಅಂಗನವಾಡಿ ಮಕ್ಕಳು ನಾಡಗೀತೆ ಹಾಡಿದರು. ಅಂಗನವಾಡಿ ಕಾರ್ಯಕರ್ತೆ ರತ್ನಾವತಿ ವಾಲ್ತಾಜೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ಶಾಲಿನಿ ಪರಮಂಡಲ ವಂದಿಸಿದರು.
ಚಂಚಲಾಕ್ಷಿ ಹಾಸ್ಪಾರೆ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಬಾಲ ವಿಕಾಸ ಸಮಿತಿಯ ಸದಸ್ಯರು, ಪೋಷಕರು, ಅಂಗನವಾಡಿ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.