ಕೆ.ವಿ.ಜಿ. ಸುಳ್ಯಹಬ್ಬ ಸಮಿತಿಯಿಂದ ಒಂದು ಲಕ್ಷ ರೂ. ನೀಡಿ ಸಂಪೂರ್ಣಗೊಳಿಸಿದ ಮನೆ ಫಲಾನುಭವಿಗೆ ಹಸ್ತಾಂತರ

0

ಕೆ.ವಿ.ಜಿ. ಸುಳ್ಯಹಬ್ಬ ಸಮಿತಿ ಪ್ರತೀ ವರ್ಷ ಆರ್ಥಿಕ ಸಂಕಷ್ಟದಿಂದ ಮನೆ ಪೂರ್ಣಗೊಳಿಸಲಾಗದೆ ಬಾಕಿಯಾಗಿರುವ ಒಂದು ಮನೆ ಪೂರ್ಣಗೊಳಿಸಲು ರೂ.ಒಂದು ಲಕ್ಷ ರೂ.ನೀಡುತ್ತಿದ್ದು, ಈ ವರ್ಷ‌ ಸುಳ್ಯ ನಗರ ವ್ಯಾಪ್ತಿಯ ಚೆಂಡೆಮೂಲೆ ನಿವಾಸಿ ಯಶೋದಾರವರ ಮನೆ ಪೂರ್ಣಗೊಳಿಸಲು ಒಂದು ಲಕ್ಷ ರೂ. ನೀಡಲಾಗಿತ್ತು.
ಆ ಮನೆಯ ಹಸ್ತಾಂತರ ಕಾರ್ಯ ಕುರುಂಜಿಯವರ ಜನ್ಮದಿನವಾದ ಇಂದು ಬೆಳಿಗ್ಗೆ ನಡೆಯಿತು.


ಸ್ಥಳೀಯ ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ಭಟ್ ಕೊಡೆಂಕಿರಿಯವರು ಜವಾಬ್ದಾರಿ ತೆಗೆದುಕೊಂಡು ಮನೆಯನ್ನು ಪೂರ್ಣಗೊಳಿಸಿದ್ದರು.
ಇಂದು ಬೆಳಿಗ್ಗೆ ಪದ್ಮಶ್ರೀ ಗಿರೀಶ್ ಭಾರದ್ವಾಜ್ ಅತಿಥಿಯಾಗಿ ಬಂದು ಮನೆಯನ್ನು ಉದ್ಘಾಟಿಸಿದರು. ನ.ಪಂ.ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ಮುಖ್ಯ ಅತಿಥಿಯಾಗಿದ್ದರು.
ಕೆ.ವಿ.ಜಿ. ಸುಳ್ಯಹಬ್ಬ ಸಮಿತಿ ಅಧ್ಯಕ್ಷ ಚಂದ್ರಶೇಖರ ಪೇರಾಲು ಸಭಾಧ್ಯಕ್ಷತೆ ವಹಿಸಿದ್ದರು.


ಸುಳ್ಯಹಬ್ಬ ಸಮಿತಿ ಸಮಾಜಸೇವಾ ವಿಭಾಗದ ಸಂಚಾಲಕ ಡಾ.ಎನ್.ಎ. ಜ್ಞಾನೇಶ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಅಂಬೆಕಲ್ಲು, ಖಜಾಂಜಿ ಜನಾರ್ದನ ನಾಯ್ಕ್, ನಿಕಟಪೂರ್ವ ಖಜಾಂಚಿ ಆನಂದ ಖಂಡಿಗ, ಸದಸ್ಯರಾದ ಹರೀಶ್ ಬಂಟ್ವಾಳ್, ಪ್ರಭಾಕರ ನಾಯರ್, ಗಂಗಾಧರ ಮಟ್ಟಿ ಉಪಸ್ಥಿತರಿದ್ದರು.