ಯೇನೆಕಲ್ಲಿನಲ್ಲಿ ನೆಕ್ರಾಜೆ ಕುಟುಂಬದ ದೈವಗಳ ಪ್ರತಿಷ್ಠೆ, ನೇಮೋತ್ಸವ

0

ನೆಕ್ರಾಜೆ ಕುಟುಂಬದ ಶ್ರೀ ಧರ್ಮದೈವ ರುದ್ರಚಾಮುಂಡಿ ಮತ್ತು ಪರಿವಾರ ದೈವಗಳ
ಪ್ರತಿಷ್ಠಾ ಕಲಶೋತ್ಸವ ಹಾಗೂ ದೈವಗಳ ನೇಮೋತ್ಸವ ಡಿ. 27ರಿಂದ ಡಿ. 30ರ ತನಕ ನಡೆಯಿತು. ಡಿ. 27ರಂದು
ಸಂಜೆ ತಂತ್ರಿಗಳ ಆಗಮನ ಬಳಿಕ ವಿವಿಧ ವೈದಿಕ ಕಾರ್ಯಕ್ರಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.


ಡಿ. 28ರಂದು ಬೆಳಿಗ್ಗೆ ಮಹಾಗಣಪತಿ ಹವನ, ಬಳಿಕ 9.15ರಿಂದ 10.00ರ ತನಕ ನಡೆಯುವ ಮಕರ ಲಗ್ನ ಶುಭ ಮುಹೂರ್ತದಲ್ಲಿ ದೈವಗಳ ಪುನಃ ಪ್ರತಿಷ್ಠೆ, ವೈದಿಕ ಕಾರ್ಯಗಳು, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರಗಿತು.


ಡಿ. 29ರಂದು ಬೆಳಿಗ್ಗೆ ಶ್ರೀ ವೆಂಕಟ್ರಮಣ ದೇವರ ಹರಿಸೇವೆ, ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಕಂಚಿರಾಯನ ಪೂಜೆ, ಬಳಿಕ ದೈವಗಳ ಭಂಡಾರ ತೆಗೆಯುವುದು. ರಾತ್ರಿ ಕುಲೆಭೂತ, ಸತ್ಯದೇವತೆ, ನೇಮೋತ್ಸವ ಬಳಿಕ ಅನ್ನಸಂತರ್ಪಣೆ, ರಾತ್ರಿ ಕಲ್ಲುರ್ಟಿ, ಪಿಲಿಭೂತ, ವರ್ಣಾರ ಪಂಜುರ್ಲಿ, ಪುರುಷ ದೈವಗಳ ನೇಮೋತ್ಸವ ನಡೆಯಿತು. ಡಿ. 30ರಂದು ಮುಂಜಾನೆ ಧರ್ಮದೈವ ರುದ್ರಚಾಮುಂಡಿ ದೈವದ ನೇಮೋತ್ಸವ ನಡೆಯಿತು. ಮಧ್ಯಾಹ್ನ ಗುಳಿಗ, ಅಂಗಾರ ಬಾಕುಡ ದೈವಗಳ ನೇಮ ಬಳಿಕ ಅನ್ನಸಂತರ್ಪಣೆ ಜರಗಲಿದೆ.