ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬಯಲು ಸಾಹಸ ಪ್ರದರ್ಶನ
ಮಕ್ಕಳು ನಮ್ಮ ದೇಶವನ್ನು ಆರಾಧಿಸುವಂತೆ ಬೆಳೆಯಲು ಸಂಸ್ಕಾರಯುತ ಶಿಕ್ಷಣ ಅಗತ್ಯ : ಸಂಸದ ಕಟೀಲ್
ಮಕ್ಕಳ ಸಾಮರ್ಥವನ್ನು ಗುರುತಿಸಿ ಪ್ರೋತ್ಸಾಹಿಸಿ ಅಭಿನಂದಿಸಿ : ಶಾಸಕಿ ಭಾಗೀರಥಿ
ಜ್ಞಾನದೀಪ ವಿದ್ಯಾಸಂಸ್ಥೆ, ಎಲಿಮಲೆ ಇದರ ವಾರ್ಷಿಕೋತ್ಸವ ಕಾರ್ಯಕ್ರಮವು ಡಿ.29ರಂದು ಜ್ಞಾನದೀಪ ವಿದ್ಯಾಸಂಸ್ಥೆಯ ಎಲಿಮಲೆಯ ಮೈದಾನದಲ್ಲಿ ನಡೆಯಿತು.
ಉದ್ಯಮಿಗಳಾದ ಉಮೇಶ್ ಮುಂಡೋಡಿ, ಕೆನಡಾರವರು ಪೂರ್ವಾಹ್ನ ಧ್ವಜಾರೋಹಣ ನೆರವೇರಿಸಿದರು. ಬಳಿಕ ವಿದ್ಯಾರ್ಥಿ ಗಳಿಂದ ಸಂಗೀತ ರಸಮಂಜರಿ ಹಾಗೂ ಮಧ್ಯಾಹ್ನದ ಬಳಿಕ ವಿದ್ಯಾರ್ಥಿಗಳಿಂದ ಚಕ್ರವ್ಯೂಹ ಯಕ್ಷಗಾನ ನಡೆಯಿತು.
ಸಂಜೆ ಸಭಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ವಹಿಸಿದ್ದರು. ಕಾರ್ಯಕ್ರಮವನ್ನು ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್ ದೀಪ ಬೆಳಗಿಸಿ ಭಾರತಾಂಬೆಗೆ ಪುಷ್ಪರ್ಚನೆ ಗೈದು ಉದ್ಘಾಟಿಸಿದರು.
ಶಾಲೆಗೆ ಕೊಡುಗೆಯಾಗಿ ನೀಡಿದ ಬಸ್ ನ್ನು ಕರ್ನಾಟಕ ಬ್ಯಾಂಕ್ ನ ಪುತ್ತೂರು ವಿಭಾಗದ ಚೀಪ್ ಮೆನೇಜರ್ ಶ್ರೀಹರಿ ಕೀ ಹಸ್ತಂತರಿಸಿದರು. ಮಂಗಳೂರು
ಕ್ಯಾಂಪ್ಕೋ ಲಿ.ನ ನಿರ್ದೇಶಕ ಕೃಷ್ಣ ಪ್ರಸಾದ್ ಮಡ್ತಿಲ ನೂತನ ಬಸ್‌ಗೆ ಚಾಲನೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಂಗಳೂರು ಇಲ್ಲಿಯ ಸಮನ್ವಯಾಧಿಕಾರಿ ಜಗದೀಶ ಎಚ್.ಎಂ. ಲ್ಯಾಪ್ ಟಾಪ್ ಹಸ್ತಾಂತರಿಸಿದರು.
ಮುಖ್ಯ ಅತಿಥಿಗಳಾಗಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಜ್ಞಾನದೀಪ ಸಂಸ್ಥೆ ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ಭಟ್ ತಳೂರು, ಉದ್ಯಮಿ ಉಮೇಶ್ ಮುಂಡೋಡಿ, ಕೆನಡಾ, ಎಂ.ಜಿ.ಎಂ. ವಿದ್ಯಾಸಂಸ್ಥೆ ಯ ಸಂಚಾಲಕ ದೊಡ್ಡಣ್ಣ ಬರೆಮೇಲು, ವಿಶ್ವಸ್ಥ ಮಂಡಳಿಯ ಕೋಶಾಧಿಕಾರಿ ಡಿ.ಟಿ.ದಯಾನಂದ, ನಿರ್ದೇಶಕರಾದ ರಾಧಾಕೃಷ್ಣ ಶ್ರೀ ಕಟೀಲ್, ಮಹಾವೀರ ಜೈನ್, ಕಿಶೋರ್ ಅಂಬೆಕಲ್ಲು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಇಂದಿರೇಶ ಗುಡ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಡಳಿತ ಮಂಡಳಿ ಸಂಚಾಲಕ ಎ.ವಿ.ತೀರ್ಥರಾಮ ಸ್ವಾಗತಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಗಧಾಧರ ಬಾಳುಗೋಡು ವಾರ್ಷಿಕ ವರದಿ ವಾಚಿಸಿದರು.
ಉಪನ್ಯಾಸಕ ಕಿರಣ್ ಗುಡ್ಡೆಮನೆ ಮತ್ತು ಶಿಕ್ಷಕಿಯರಾದ ಶ್ರೀಲತಾ, ರೇಖಾ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಕೃಷ್ಣಯ್ಯ ಮೂಲೆತೋಟ ವಂದಿಸಿದರು.
ಬಳಿಕ ವಿದ್ಯಾರ್ಥಿಗಳಿಂದ ಭರತನಾಟ್ಯ, ದೀಪಾರತಿ, ಕೋಲಾಟ, ಯೋಗ, ಮಲ್ಲಕಂಬ, ನೃತ್ಯ, ನೃತ್ಯ ರೂಪಕ, ಸಾಸಹ ಪ್ರದರ್ಶನಗಳು ನಡೆಯಿತು. ಪೋಷಕರು, ಹಳೆ ವಿದ್ಯಾರ್ಥಿಗಳು, ಶಾಲಾಭಿಮಾನಿಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಕ್ಯಾಪ್ಟನ್ ಪ್ರಾಂಜಲ್ ನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಯಕ್ಷಗಾನ ತರಬೇತು ನೀಡಿದ ಬಾಲಕೃಷ್ಣ ನಾಯ್ಕ ಬೊಮ್ಮಾರು ಮತ್ತು ಬಾಲಕೃಷ್ಣ ನಾಯರ್ ನೀರಬಿದಿರೆಯವರನ್ನು ಸನ್ಮಾನಿಸಲಾಯಿತು.