ಅಬ್ದುಲ್ಲ ಮರಸಂಕ ನಿಧನ

0

ಜಾಲ್ಸೂರು ಗ್ರಾಮದ ಮರಸಂಕ ಅಬ್ದುಲ್ಲ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಜ.4ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಜಾಲ್ಸೂರಿನಲ್ಲಿ ಹಲವು ವರ್ಷಗಳ ಕಾಲ ಗೂಡಂಗಡಿ ಹಾಗೂ ಹೋಟೆಲ್ ವ್ಯಾಪಾರಸ್ಥರಾಗಿದ್ದ ಅವರು ಗಾಡಿ ಅಬ್ದುಲ್ಲ ಎಂದೇ ಹೆಸರುವಾಸಿಯಾಗಿದ್ದರು.

ಮೃತರು ಪತ್ನಿ ಮರಿಯಮ್ಮ, ಪುತ್ರರಾದ ಶರೀಫ್, ರಜಾಕ್, ನಾಸಿರ್, ಪುತ್ರಿಯರಾದ ನೆಸಿಯಾ, ರೈಯಾನ, ಸೌದಾಬಿ, ರಾಬಿಯಾ, ಸಹೋದರರಾದ ಅಬ್ಬಾಸ್, ಇಬ್ರಾಹಿಂ, ಸಹೋದರಿಯರಾದ ಮರಿಯಮ್ಮ, ಬೀಫಾತಿಮ್ಮ ಸೇರಿದಂತೆ ಸೊಸೆಯಂದಿರು, ಮೊಮ್ಮಗಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.