ಸಂಪಾಜೆ ಧಾನ್ಯದ ಸಹಕಾರಿ ಸಂಘದ ಚುನಾವಣೆ : 13 ಮಂದಿ ಅವಿರೋಧ ಆಯ್ಕೆ

0

ಸಂಪಾಜೆ ಧಾನ್ಯದ ಸಹಕಾರಿ ಸಂಘ ನಿಯಮಿತ , ಸುಳ್ಯ ದ.ಕ. ಇದರ ಮುಂದಿನ ಐದು ವರ್ಷಗಳಿಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ೧೭ ಜನ ಅರ್ಹ ಸದಸ್ಯರು ನಾಮಪತ್ರ ಸಲ್ಲಿಸಿದ್ದು , ೧೫. ರಂದು ನಡೆದ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆಯಂದು ೪ ಜನ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು , ಬಾಕಿ ಹದಿಮೂರು ಅಭ್ಯರ್ಥಿಗಳು ಕಣದಲ್ಲಿ ಉಳಿದಿರುವುದರಿಂದ೧೩ ಮಂದಿ ಅವಿರೋಧವಾಗಿ ಆಯ್ಕೆಯಾಗಿರುವರು.

ಸಾಲಗಾರಕ್ಷೇತ್ರದ ಸಾಮಾನ್ಯ ಸ್ಥಾನದಿಂದ ಆನಂದ ಪಿ ಎಲ್., ಈಶ್ವರ ಆಚಾರ್ಯ, ಕಿಶೋರ ಬಿ ಎಸ್., ಗಣಪತಿ ಭಟ್ ಪಿ ಎನ್.,ಮಹಮ್ಮದ್ ಹನೀಫ, ಯಶೋದ ಪಿ ಎಲ್., ಸೀತಾರಾಮ ಕೆ., ಸಾಲಗಾರಕ್ಷೇತ್ರದ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಪ್ರೇಮ ಡಿ., ಸಾಲಗಾರಕ್ಷೇತ್ರದ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ರಾಮ ನಾಯ್ಕ, ಸಾಲಗಾರಕ್ಷೇತ್ರದ ಹಿಂದುಳಿದ ವರ್ಗ ಪ್ರವರ್ಗ ಎ – ೧ ಕ್ಷೇತ್ರದಿಂದ ಹಸೈನಾರ್ ಎ ಕೆ., ಸಾಲಗಾರಕ್ಷೇತ್ರದ ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನ – ೧ ಪುಷ್ಪರಾಜ ಗಾಂಭೀರ್, ಸಾಲಗಾರಕ್ಷೇತ್ರದ ಮಹಿಳಾ ಮೀಸಲು ಸ್ಥಾನಗಳು – ೨ ರಜನಿ ಎಸ್ ಎಲ್., ಲೀಲಾವತಿ ಕೆ ಎಚ್. ಆಯ್ಕೆಯಾಗಿದ್ದಾರೆ.