ವೀರ ಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ವತಿಯಿಂದ ಕ್ರಿಕೆಟ್ ಪಂದ್ಯಾಟ

0

ಶೂಲಿನಿ ಕ್ರಿಕೆಟರ್ಸ್ ಮುತ್ಲಾಜೆ ಪ್ರಥಮ, ಕುಕ್ಕೆ ಸಿಕ್ಸರ್ಸ್ ದ್ವಿತೀಯ

ವೀರ ಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ಇದರ ನಾಲ್ಕನೇ ವರ್ಷದ ಆಹ್ವಾನಿತ 20 ತಂಡಗಳ ನಿಗದಿತ ಓವರಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಜ. 25 ಮತ್ತು 26 ರಂದು ದ.ಕ.ಜಿ.ಪ.ಸ.ಮಾ.ಹಿ.ಪ್ರಾ.ಶಾಲೆ ಗುತ್ತಿಗಾರಿ ನ ಆಟದ ಮೈದಾನದಲ್ಲಿ ನಡೆಯಿತು.

ಪಂದ್ಯಾಕೂಟದಲ್ಲಿ ಪ್ರಥಮ ಸ್ಥಾನವನ್ನು ಶ್ರೇಯಸ್ ಮುತ್ಲಾಜೆ ಮಾಲಕತ್ವದ ಶೂಲಿನಿ ಕ್ರಿಕೆಟರ್ಸ್ ಮುತ್ಲಾಜೆ ಪಡೆಯಿತು. ಹರ್ಷಿತ್ ಸುಬ್ರಹ್ಮಣ್ಯ ಅವರ ಮಾಲಕತ್ವದ ಕುಕ್ಕೆ ಸಿಕ್ಸರ್ಸ್ ದ್ವಿತೀಯ ಸ್ಥಾನ ಪಡೆಯಿತು. ಸೆಮಿ ಫೈನಲ್ ಹಂತಕ್ಕೆ ತಲುಪಿದ ಫ್ರೆಂಡ್ಸ್ ಕ್ಲಬ್ ಪೈಲಾರು ಮತ್ತು ಸಕ್ಸಸ್ ಕುಕ್ಕರಬೆಟ್ಟು ಈ ಎಲ್ಲಾ ವಿಜೇತ ತಂಡಗಳಿಗೆ ನಗದು ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರೋಪ ದಲ್ಲಿ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಕ್ರೀಡಾ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿ 2019-2020ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುಷ್ ಎಣ್ಣೆಮಜಲು, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಕಕ್ಕಾಗಿ,ರಾಜ್ಯ ಮಟ್ಟದ ಕರಾಟೆಪಟು, ರಾಜ್ಯ ಮಟ್ಟದ ಕರಾಟೆಪಟು ಚೇತನ್ ಮುಂಡೋಡಿ, ರಾಷ್ಟ್ರೀಯ ಮಟ್ಟದ ಖೇಲೂ ಇಂಡಿಯಾ ಕಬ್ಬಡ್ಡಿ ಆಟಗಾರ್ತಿಯರಾದ ಕು| ಪ್ರಣಮ್ಯ ಕಡಪಳ ಮತ್ತು ಕು| ನಿಭಾ ಪೂಂಬಾಡಿ ಗೌರವಿಸಲಾಯಿತು. ವಲಯ ಅರಣ್ಯಾಧಾಕಾರಿಗಳು ಪಂಜದ ಗಿರೀಶ್ ಸನ್ಮಾನಿಸಿದರು.

ದಾಖಲೆ ಬರೆದ ಆಟ

ಈ ಪಂದ್ಯಾಕೂಟದ ಸೆಮಿ ಫೈನಲ್ ಹಂತದಲ್ಲಿ ಶೂಲಿನಿ ಕ್ರಿಕೆಟರ್ಸ್ ಮುತ್ಲಾಜೆ ತಂಡವು ಫ್ರೆಂಡ್ಸ್ ಕ್ಲಬ್ ಪೈಲಾರು ತಂಡದ ಎದುರು ವೀರೋಚಿತ ಗೆಲುವನ್ನು ದಾಖಲಿಸುವುದರ ಮೂಲಕ ವೀರ ಮಾರುತಿ ಕ್ರಿಕೆಟ್ ಟೂರ್ನಮೆಂಟ್‌‌‌ ಲೋಕಲ್ ಟೂರ್ನ ಮೆಂಟ್ ನಲ್ಲಿ ಹೊಸ ದಾಖಲೆಯನ್ನು ಸೃಷ್ಟಿ ಮಾಡಿತು. ಸೆಮಿಫೈನಲ್ಸ್ ನ ಪಂದ್ಯದಲ್ಲಿ ಅಂತಿಮ ಓವರಿನ 6 ಎಸೆತಗಳ ಮುಂದೆ 29 ರನ್ನುಗಳ ಗುರಿಯನ್ನು ಬೆನ್ನತ್ತಿದ ಶೂಲಿನಿ ಕ್ರಿಕೆಟರ್ಸ್ ನ, ಅಶ್ರಫ್ ಕುಪ್ಪೆಪದವು ಪದವು ಅವರ ಬಲಿಷ್ಟವಾದ ಸಿಕ್ಸರ್ ಗಳ ಮೂಲಕ‌ ತಂಡಕ್ಕೆ ವಿಜಯ ತಂದೊಡ್ಡಿದ್ದು ದಾಖಲಿಸ ಬಹುದಾದ ಆಟವಾಗಿತ್ತು. ಇದರ ವಿಡಿಯೋ ಒಂದು ವೈರಲ್ ಆಗುತ್ತಿದೆ.