ಪಂಜ‌: ಶ್ರೀ ದೇವರ ಅವಭೃತ ಸ್ನಾನ

0

ಇಂದು ರಾತ್ರಿ ಶ್ರೀ ಕಾಚುಕುಜುಂಬ ದೈವದ ನೇಮ

ನಾಳೆ ಮುಂಜಾನೆ ಶ್ರೀ ಉಳ್ಳಾಕುಲು ದೈವದ ನೇಮ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವರ್ಷಾವಧಿ ಜಾತ್ರೋತ್ಸವ ಪ್ರಯುಕ್ತ
ಫೆ.7.ರಂದು ಶ್ರೀ ದೇವರ ಅವಭೃತ ಸ್ನಾನ ಜಳಕದ ಹೊಳೆಯಲ್ಲಿ ಜರುಗಿತು.ಬಳಿಕ ದೇವಳದಲ್ಲಿ ಬಲಿ ಬಟಲು ಕಾಣಿಕೆ.ಧ್ವಜಾವರೋಣ ಜರುಗಿತು. ದೇವಳದ ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿ ಪ್ರಸಾದ್ ಕಾನತ್ತೂರ್, ಉತ್ಸವ ಸಮಿತಿ ಸಂಚಾಲಕರು,ಸದಸ್ಯರು, ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.

ಇಂದು ಸಂಜೆ ದೇಗುಲದಿಂದ ಶ್ರೀ ಕಾಚುಕುಜುಂಬ, ಉಳ್ಳಾಕುಲು ದೈವಗಳ ಭಂಡಾರ ವನ್ನು ಮೆರವಣಿಗೆ ಮೂಲಕ ಮೂಲಸ್ಥಾನ ಗರಡಿ ಬೈಲಿಗೆ ಹೋಗಿ ಧ್ವಜಾರೋಹಣ , ಶ್ರೀ ಕಾಚುಕುಜುಂಬ ದೈವದ ನೇಮ ಪ್ರಸಾದ ವಿತರಣೆ ನಡೆಯಲಿದೆ.

ಫೆ.8 ರಂದು ಮುಂಜಾನೆ ಗರಡಿ ಬೈಲಿನ ಮೂಲ ನಾಗನ ಕಟ್ಟೆಯಲ್ಲಿ ತಂಬಿಲ ಹಾಗೂ ಶ್ರೀ ಉಳ್ಳಾಕುಲು ದೈವದ ನೇಮ ,ಪ್ರಸಾದ ವಿತರಣೆ , ಧ್ವಜಾವರೋಹಣ, ಶ್ರೀ ದೇವಳದಲ್ಲಿ ಸಂಪ್ರೋಕ್ಷಣೆ ,ಮಹಾಪೂಜೆ ವೈದಿಕ ಮಂತ್ರಾಕ್ಷತೆ ಪ್ರಸಾದ ವಿತರಣೆ ಜರುಗಲಿದೆ. ರಾತ್ರಿ ಶಿರಾಡಿ ದೈವದ ಬಂಡಾರ ಬರುವುದು.ಫೆ.9.ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪೂಜೆ ಹಾಗೂ ಶಿರಾಡಿ ದೈವದ ನೇಮ ಜರುಗಲಿದೆ.