ಇಂದು ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ಕ್ರೀಡಾಕೂಟ

0

ಪುತ್ತೂರಿನ ಕೊಂಬೆಟ್ಟು ತಾಲೂಕು ಮೈದಾನದಲ್ಲಿ ಆಯೋಜನೆ

ದಕ್ಷಿಣ ಕನ್ನಡ ಜಿಲ್ಲಾ
ಮರಾಟಿ ಸಂರಕ್ಷಣಾ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ
ಜಿಲ್ಲಾ ಮಟ್ಟದ ಕ್ರೀಡಾಕೂಟ-2024 ಇಂದು (ಫೆ.11) ಪುತ್ತೂರಿನ ತಾಲೂಕು ಕ್ರೀಡಾಕೂಟ ಕೊಂಬೆಟ್ಟುವಿನಲ್ಲಿ ನಡೆಯಲಿದೆ.‌

ಕ್ರೀಡಾಕೂಟದ ಪ್ರಯುಕ್ತ ಸಮಾಜ ಬಾಂಧವರಿಗೆ ವಿವಿಧ ಆಟೋಟಗಳನ್ನು ಹಮ್ಮಿಕೊಳ್ಳಳಾಗಿದೆ.‌ ಇದರ ಉದ್ಘಾಟನೆ ಇಂದು ಬೆಳಿಗ್ಗೆ ನಡೆಯಲಿದೆ. ಆ ಬಳಿಕ
ಅಂಗನವಾಡಿ ಮಕ್ಕಳಿಗೆ ಕಾಳು ಹೆಕ್ಕುವುದು, ಕಪ್ಪೆ ಜಿಗಿತ, ಬಾಲ್ ಪಾಸಿಂಗ್, 50 ಮೀ.ಓಟ

ಶಾಲಾ ಮಕ್ಕಳಿಗೆ (1-3ನೇ ತರಗತಿ) 50 ಮೀ. ಓಟ, ಕಪ್ಪೆ ಜಿಗಿತ, ಬಾಲ್ ಪಾಸಿಂಗ್, ಸಂಗೀತ ಕುರ್ಚಿ, ಬಕೆಟಿಗೆ ಬಾಲ್ ಹಾಕುವುದು, ಬಾಲ್ ಬಿಸಾಡುವುದು

4ರಿಂದ 7ನೇ ತರಗತಿ
ಬಾಲಕರಿಗೆ 100 ಮೀ.ಓಟ, ಗೋಣಿಚೀಲ ಓಟ, ಲಾಂಗ್ ಜಂಪ್, ವಿಕೆಟಿಗೆ ಬಾಲ್ ಹಾಕುವುದು, 200 ಮೀ.ಓಟ

ಬಾಲಕಿಯರಿಗೆ ಲಿಂಬೆ ಚಮಚ ಓಟ, 100 ಮೀ.ಓಟ, 200 ಮೀ.ಓಟ, ಲಾಂಗ್ ಜಂಪ್, ವಿಕೆಟಿಗೆ ಬಾಲ್ ಹಾಕುವುದು

8ರಿಂದ 10ನೇ ತರಗತಿ
ಬಾಲಕರಿಗೆ 100 ಮೀ.ಓಟ, 200 ಮೀ.ಓಟ, ಲಾಂಗ್ ಜಂಪ್, ಹೈಜಂಪ್, ಗುಂಡು ಎಸೆತ

ಬಾಲಕಿಯರಿಗೆ 100 ಮೀ.ಓಟ, 200 ಮೀ.ಓಟ, ಲಾಂಗ್ ಜಂಪ್, ಹೈಜಂಪ್, ಗುಂಡು ಎಸೆತ

ಕಾಲೇಜು ವಿಭಾಗ
ಯುವಕರಿಗೆ 200 ಮೀ.ಓಟ, 800 ಮೀ.ಓಟ, ರಿಲೇ 4 ಗಿ 400, ಗುಂಡು ಎಸೆತ, ಹೈಜಂಪ್, ಲಾಂಗ್ ಜಂಪ್, ಈಟಿ ಎಸೆತ

ಯುವತಿರಿಗೆ 200 ಮೀ.ಓಟ, 800 ಮೀ.ಓಟ, ರಿಲೇ 4 ಗಿ 100, ಗುಂಡು ಎಸೆತ, ಹೈಜಂಪ್, ಲಾಂಗ್ ಜಂಪ್, ಚಕ್ರ ಎಸೆತ

25 ವರ್ಷ ಮೇಲ್ಪಟ್ಟು
ಪುರುಷರು 400 ಮೀ.ಓಟ, 800 ಮೀ.ಓಟ, 1500 ಮೀ.ಓಟ, ಗುಂಡು ಎಸೆತ, ರಿಲೇ 4 ಗಿ 100, ಲಾಂಗ್ ಜಂಪ್

ಮಹಿಳೆಯರು 200 ಮೀ.ಓಟ, 400 ಮೀ.ಓಟ, 800 ಮೀ.ಓಟ, ಗುಂಡು ಎಸೆತ, ಗುಂಡು ಎಸೆತ, ರಿಲೇ 4 ಗಿ 100, ಸಂಗೀತ ಕುರ್ಚಿ

ಹಿರಿಯರ ವಿಭಾಗ
ಪುರುಷರು ವೇಗ ನಡಿಗೆ 200 ಮೀ, 50 ಮೀ ಓಟ

ಮಹಿಳೆಯರು ವೇಗ ನಡಿಗೆ 100 ಮೀ, ಸಂಗೀತ ಕುರ್ಚಿ

ಗುಂಪು ಆಟ ಕಬಡ್ಡಿ (7 ಜನ), ಹಗ್ಗ ಜಗ್ಗಾಟ (8 ಜನ), ಕ್ರಿಕೆಟ್ ಪಂದ್ಯಾಟ (11 ಜನ)

ಮಹಿಳೆಯರು ತ್ರೋಬಾಲ್ (8 ಜನ), ಹಗ್ಗ ಜಗ್ಗಾಟ (8 ಜನ) ನಡೆಯಲಿದೆ.

ಕ್ರೀಡಾಕೂಟದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ
ಅಶೋಕ ನಾಯ್ಕ ಕೆದಿಲ ಜಿಲ್ಲಾ ಅಧ್ಯಕ್ಷರು, ಶ್ರೀಧರ ನಾಯ್ಕ ಮುಂಡೋವುಮೂಲೆ ಜಿಲ್ಲಾ ಸಂಚಾಲಕರು, ವಿಮಲ ದೈತೋಟ ಜಿಲ್ಲಾ ಕಾರ್ಯದರ್ಶಿ,
ಬಾಲಕೃಷ್ಣ ನಾಯ್ಕ ಮಂಗಳೂರು ಜಿಲ್ಲಾ ಉಪಾಧ್ಯಕ್ಷರು,
ಯಶವಂತ ನಾಯ್ಕ ಮಂಡೆಕೋಲು ಜಿಲ್ಲಾ ಕ್ರೀಡಾ ಸಂಚಾಲಕರು, ಕುಶಾಲಪ್ಪ ನಾಯ್ಕ ಮಂಗಳೂರು ಜಿಲ್ಲಾ ಜತೆ ಕಾರ್ಯದರ್ಶಿ,
ಶೇಷಪ್ಪ ನಾಯ್ಕ ಅಡ್ಯನಡ್ಕ ಜಿಲ್ಲಾ ಜತೆ ಕಾರ್ಯದರ್ಶಿ,
ಗಂಗಾಧರ ನಾಯ್ಕ ಸಜಿಪ ಜಿಲ್ಲಾ ಖಜಾಂಜಿ ವಿನಂತಿಸಿದ್ದಾರೆ.