ಬೆಳ್ಳಾರೆ ಪೊಲೀಸ್ ಠಾಣೆ ಹಾಗೂ ಕೊಡಿಯಾಲ ಗ್ರಾಮದ ಕಲ್ಪಡ ಕಾಲೊನಿಯಲ್ಲಿ ಎಸ್.ಸಿ,ಎಸ್.ಟಿ.ಸಭೆಯು ಫೆ.11 ರಂದು ನಡೆಯಿತು.
ಬೆಳ್ಳಾರೆ ಪೊಲೀಸ್ ಠಾಣೆಯ ಎಸ್.ಐ.ಸಂತೋಷ್ ಬಿ.ಪಿ.ಮಾಹಿತಿ ನೀಡಿದರು.
ಎಸ್.ಸಿ./ ಎಸ್.ಟಿ ಯವರ ಕುಂದು ಕೊರತೆಗಳ ಬಗ್ಗೆ ಮಾಹಿತಿ, ಗ್ರಾಮಗಳಲ್ಲಿ ಆಗುವ ಅಪರಾಧಗಳು ಹಾಗೂ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮಸ್ಥರ ಸಹಕಾರವನ್ನು ಕೋರಲಾಯಿತು.
ಕಾಲನಿಯಲ್ಲಿ ಹೆಚ್ಚಿನ ಜನರು ಸಭೆಯಲ್ಲಿ ಪಾಲ್ಗೊಂಡಿದ್ದರು.