ಆಲೆಟ್ಟಿ ಪಂಜಿಮಲೆಯಲ್ಲಿ ಮಾಮೂಲು ಪ್ರಕಾರ ನಡೆಯುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಫೆ. 19 ಮತ್ತು 20 ರಂದು ನಡೆಯಲಿರುವುದು.
ಫೆ. 19 ರಂದು ಪೂರ್ವಾಹ್ನ ಅರ್ಚಕರಿಂದ ಗಣಪತಿ ಹೋಮವಾಗಿ ಉಗ್ರಣ ತುಂಬಿಸುವ ಕಾರ್ಯಕ್ರಮ ನಡೆಯಲಿದೆ.
ಬಳಿಕ ತೀಯ ಸಮಾಜ ಬಾಂಧವರಿಂದ ಮೇಲೇರಿಯ ಅಗ್ನಿ ಕುಂಡದ ಜೋಡಣೆಯ ಕಾರ್ಯ ನಡೆಯಲಿದೆ.
ರಾತ್ರಿ ಗುಂಡ್ಯ ಶ್ರೀ ವಯನಾಟ್ ಕುಲವನ್
ದೈವಸ್ಥಾನದಿಂದ ವಿಷ್ಣುಮೂರ್ತಿ ದೈವದ ಭಂಡಾರವು ದೈವದ ಪಾತ್ರಿ ರಾಮ ಮಣಿಯಾಣಿ ಆಲೆಟ್ಟಿ ಯವರ ನೇತೃತ್ವದಲ್ಲಿ ಆಗಮಿಸಲಿರುವುದು. ಬಳಿಕ ಮೇಲೆರಿಗೆ ಅಗ್ನಿ ಸ್ಪರ್ಶವಾಗಲಿದೆ.
ಆಲೆಟ್ಟಿ ಸದಾಶಿವ ದೇವಸ್ಥಾನದಿಂದ ಭಜನಾ ಮೆರವಣಿಗೆಯು ಆಗಮಿಸಿ ದೈವದ ಸನ್ನಿಧಿಯಲ್ಲಿ ಭಜನಾ ಕಾರ್ಯಕ್ರಮ ನಡೆದು ಶ್ರೀವಿಷ್ಣುಮೂರ್ತಿ ದೈವದ ಕುಲ್ಚಾಟವು ನಡೆಯಲಿರುವುದು.
ಮರುದಿನ ಪ್ರಾತಕಾಲ 5:30ಕ್ಕೆ ಶ್ರೀವಿಷ್ಣುಮೂರ್ತಿ ದೈವದಅಗ್ನಿಪ್ರವೇಶವಾಗಲಿದೆ. ನಂತರ ಮಾರಿಕಳ ಪ್ರವೇಶವಾಗಿ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಲಿದೆ.
ರಾತ್ರಿ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ಇದರ ಪ್ರಾಯೋಜಕತ್ವದಲ್ಲಿ ಬಪ್ಪನಾಡು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ವರಿಂದ ಶಿವದೂತ ಗುಳಿಗ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನ ವಾಗಲಿರುವುದು.
ರಾತ್ರಿ ಸಮಯದಲ್ಲಿ ಭಕ್ತಾದಿಗಳಿಗೆ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಲಿದೆ
ಎಂದು ಸಮಿತಿಯ ಅಧ್ಯಕ್ಷ ಸುಧಾಕರ ಆಲೆಟ್ಟಿ ಯವರು ತಿಳಿಸಿದರು.