ಫೆ. 24: ಕೊಡೆಂಚಿಕಾರ್ ಕೊರಗ ತನಿಯ ದೈವಸ್ಥಾನದಲ್ಲಿ ಕೊರಗಜ್ಜ ದೈವದ ನೇಮೋತ್ಸವ

0

ಪೇರಾಲು ಮಂಡೆಕೋಲು ಗ್ರಾಮದ ಕೊಡೆಂಚಿಕಾರ್ ಶ್ರೀ ಕೊರಗತನಿಯ ದೈವದ ದೈವಸ್ಥಾನದಲ್ಲಿ 22 ನೇ ವರ್ಷದ ಶ್ರೀ ಕೊರಗತನಿಯ ಮತ್ತು ಶ್ರೀ ಗುಳಿಗ ದೈವಗಳ ನೇಮೋತ್ಸವವು
ಫೆ. 24 ರಂದು ನಡೆಯಲಿರುವುದು.

ಫೆ. 24 ರಂದು ಬೆಳಗ್ಗೆ ಗಣಪತಿ ಹೋಮ ಮತ್ತು ನಾಗಪೂಜೆ, ನಂತರ ಶನಿ ಪೂಜೆ, ಹೂವಿನಪೂಜೆ, ಕಲಶ ಸ್ನಾನ, ಬೆಳಿಗ್ಗೆ 10 ಗಂಟೆಯಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿರುವುದು.
ಸಂಜೆ 3 ಗಂಟೆಗೆ ಗುಳಿಗನಕೋಲವಾಗಿ ಪ್ರಸಾದ ವಿತರಣೆ ಹಾಗೂ ರಾತ್ರಿ ಮಹಾಪೂಜೆ ಮತ್ತು ಸ್ವಾಮಿ ಕೊರಗಜ್ಜನ ಭಂಡಾರ ತೆಗೆದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯಾಗಲಿದೆ. ರಾತ್ರಿ 10.00 ಕ್ಕೆ ಶ್ರೀ ಕೊರಗಜ್ಜ ದೈವದ ಕೋಲ ನಡೆಯಲಿರುವುದು. ರಾತ್ರಿ ಗಂಟೆ 1.00 ರಿಂದ ಶ್ರೀ ಕೊರಗ ತನಿಯ ದೈವಕ್ಕೆ ಹೂಮಾಲೆ ಅರ್ಪಿಸುವುದು. ಮರುದಿನ ಪ್ರಾತ:ಕಾಲ ಪ್ರಸಾದ ವಿತರಣೆಯಾಗಲಿದೆ. ಈ ಸಂದರ್ಭದಲ್ಲಿ ಹರಕೆಯ ತುಲಾಭಾರ ಸೇವೆಯು ನಡೆಯಲಿರುವುದು
ಎಂದು ಆಡಳ್ತೆದಾರ ಬಾಬು ಕೆ ಕೊಡೆಂಚಿಕಾರ್ ರವರು ತಿಳಿಸಿರುತ್ತಾರೆ.