ಬಾಗಲಕೋಟೆಯ ಉದ್ಯಮಿ ನಾಗರಾಜ ಕುಲಕರ್ಣಿ, ಧಾರ್ಗವಿ ಕುಲಕರ್ಣಿ, ಭೀಮಾಜಿ, ವೈ.ಎಸ್. ಗಲಗಲಿ ಜಮಖಂಡಿ ಮತ್ತು ಕುಟುಂಬಸ್ಥರು ಸೇರಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಬೆಳ್ಳಿಯ ಪಲ್ಲಕಿಯ ಕೊಡುಗೆ
ನೀಡಲಿದ್ದು ಅದರ ಪುರ ಪ್ರವೇಶ ಇಂದು (ಡಿ.15 ) ರಂದು ನಡೆಯಿತು.
ಅದ್ದೂರಿ ಮೆರವಣಿಗೆಯಲ್ಲಿ ಅದನ್ನು ದೇವಸ್ಥಾನಕ್ಕೆ ತರಲಾಯಿತು. ಕಾಶಿಕಟ್ಟೆಯಿಂದ ಆನೆ ಬಿರುದಾವಲಿಗಳಿದ್ದು ಮೆರವಣಿಗೆಯಲ್ಲಿ ಬರಲಾಯಿತು.
ಈ ಸಂದರ್ಭ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಪಲ್ಲಕಿ ದಾನಿಗಳ ಕುಟುಂಬ ಸ್ನೇಹಿತ ಶ್ರೀಕುಮಾರ್ ಬಿಲದ್ವಾರ, ಮಾಸ್ಟರ್ ಪ್ಲಾನ್ ಸದಸ್ಯ ಸತೀಶ್ ಕೂಜುಗೋಡು ಮತ್ತಿತರರು ಉಪಸ್ಥಿತರಿದ್ದರು.
ನಾಳೆ (ಡಿ.16) ರಂದು ಇದರ ಸಮರ್ಪಣೆ ಆಗಲಿರುವುದಾಗಿ ತಿಳಿದು ಬಂದಿದೆ.
ಪೋಟೋ: ಪ್ರತಿರೂಪ ಸುಬ್ರಹ್ಮಣ್ಯ