ಮರ್ಕಂಜದ ದಾಸರಬೈಲು ಭಾಗದಲ್ಲಿ ಇಂದು ಸಂಜೆ 7 ಗಂಟೆಗೆ ಕಾಡಾನೆಗಳ ಹಿಂಡು ಕಂಡು ಬಂದ ಘಟನೆ ವರದಿಯಾಗಿದೆ.
7 ಆನೆಗಳ ಹಿಂಡು ದಾಸರಬೈಲು ಭಾಗದಲ್ಲಿ ರಸ್ತೆ ದಾಟುವುದು ಕಂಡು ಬಂದಿದೆ.
ದಾಸರಬೈಲು ಶಾಲೆಯಲ್ಲಿ ಪಂಪು ದುರಸ್ತಿ ಮಾಡಿ ಬರುವಾಗ ಕಾಡಾನೆಗಳ ಹಿಂಡು ಕಾಣಸಿಕ್ಕಿದೆ.
ಕೆಲಸ ದಿನಗಳ ಹಿಂದೆಯಷ್ಟೆ ಹೈದಂಗೂರು – ಕೊರತ್ತೋಡಿ – ಕೊಡಪಾಲ ಭಾಗದಲ್ಲಿ ಕಾಡಾನೆಗಳ ಹಿಂಡು ಕಾಣಸಿಕ್ಕಿತ್ತು. ಆ ಬಳಿಕ ಉಬರಡ್ಕ ಭಾಗಕ್ಕೆ ತೆರಳಿತ್ತು. ಇದೀಗ ದಾಸರಬೈಲು ಭಾಗಕ್ಕೆ ಮತ್ತೆ ಬಂದಿರುವುದಾಗಿ ತಿಳಿದು ಬಂದಿದೆ