ಫೆ. 22-23: ಕೊನ್ನಡ್ಕ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ನೇಮೋತ್ಸವ -ಆಮಂತ್ರಣ ಪತ್ರ ಬಿಡುಗಡೆ

0

ಕೊನ್ನಡ್ಕ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ
ಹಾಗೂ ಸ್ವಾಮಿ ಕೊರಗಜ್ಜನ 10ನೇ ವರ್ಷದ ನೇಮೋತ್ಸವ ಫೆ. 22-23ರಂದು ನಡೆಯಲಿದ್ದು, ಆಮಂತ್ರಣ ಪತ್ರ ಮತ್ತು ಲಕ್ಕಿ ಕೂಪನ್ ಬಿಡುಗಡೆ ಡಿ.15ರಂದು ತಿಂಗಳ ಸಂಕ್ರಮಣದ ಕಾರ್ಯಕ್ರಮದ ಸಂದರ್ಭದಲ್ಲಿ ಬಿಡುಗಡೆಗೊಂಡಿತು.


ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ
ಶ್ರೀಕೃಷ್ಣ ಭಟ್ ಪಟೋಳಿ ಆಮಂತ್ರಣವನ್ನು ಮತ್ತು
ಲಕ್ಕಿ ಕೂಪನ್ ಬೊಳ್ಳೆಚ್ಚಿ ಕೊನ್ನಡ್ಕ ಬಿಡುಗಡೆಗೊಳಿಸಿದರು. ಅತಿಥಿಗಳನ್ನು ಈ ಸಂದರ್ಭದಲ್ಲಿ ದೈವಸ್ಥಾನದ ವತಿಯಿಂದ ಶಾಲು ಹೊದಿಸಿ ಫಲವಸ್ತು ನೀಡಿ ಗೌರವಿಸಲಾಯಿತು.