ಕೇನ್ಯ ಒತ್ತೆಕೋಲ

0

ಕೇನ್ಯ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ 53ನೇ ವರ್ಷದ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಫೆ. 12ರಂದು ಕೇನ್ಯ ವಿಷ್ಣುನಗರದಲ್ಲಿ ನಡೆಯಿತು.

ಸಂಜೆ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ತೆಗೆಯಲಾಯಿತು. ಬಳಿಕ ಮೇಲೇರಿಗೆ ಬೆಂಕಿ ಕೊಡುವುದು, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಕುಳಿಚಾಟ ನಡೆಯಿತು.

ಫೆ. 13ರಂದು ಬೆಳಿಗ್ಗೆ ದೈವದ ಮೇಲೇರಿ ಪ್ರವೇಶ, ಪ್ರಸಾದ ವಿತರಣೆ ಬಳಿಕ ಮುಳ್ಳು ಗುಳಿಗ ನೇಮ ನಡೆಯಲಿದೆ. ಫೆ. 12ರಂದು ರಾತ್ರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ, ಎಡಮಂಗಲ ಇವರಿಂದ ಯಕ್ಷಗಾನ ಬಯಲಾಟ ನಡೆಯಿತು.