ಮಾನಸ ಮಹಿಳಾ ಮಂಡಲ (ರಿ ) ಜಟ್ಟಿಪಳ್ಳ ಇದರ ಬೆಳ್ಳಿ ಹಬ್ಬ ಆಚರಣಾ ಸಮಿತಿ ರಚನೆಗೊಂಡಿದ್ದು ಗೌರವಾಧ್ಯಕ್ಷೆಯಾಗಿ ನ.ಪಂ.ಸದಸ್ಯೆ ಶ್ರೀಮತಿ ಸರೋಜಿನಿ ಪೆಲ್ತಡ್ಕ , ಅಧ್ಯಕ್ಷೆಯಾಗಿ ಶ್ರೀಮತಿ ಚಂದ್ರಾಕ್ಷಿ ಜೆ. ರೈ, ಕಾರ್ಯಾಧ್ಯಕ್ಷೆಯಾಗಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಚಿತ್ರಲೇಖ ಮಡಪ್ಪಾಡಿ , ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಸುನೀತಾ ರಾಮಚಂದ್ರ ಹಾಗೂ ಖಜಾಂಚಿಯಾಗಿ ಶ್ರೀಮತಿ ಸವಿತಾ ಲಕ್ಷ್ಮಣ್ ಆಯ್ಕೆಯಾದರು.
1999 ರಲ್ಲಿ ಸ್ಥಾಪನೆಗೊಂಡ ಮಾನಸ ಮಹಿಳಾ ಮಂಡಲ ಇದೀಗ ಬೆಳ್ಳಿ ಹಬ್ಬ ಆಚರಣೆಯ ವರ್ಷದಲ್ಲಿದೆ. ಬೆಳ್ಳಿ ವರ್ಷದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಜ.21 ರಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಗೌರವ ಸಲಹೆಗಾರರಾಗಿ ರಮಾನಂದ ರೈ , ರಘುನಾಥ ಜಟ್ಟಿಪಳ್ಳ , ದಿನೇಶ್ ಮಡಪ್ಪಾಡಿ ಹಾಗೂ ಸಂತೋಷ್ ಕುಮಾರ್ ಶೆಟ್ಟಿ ಇವರುಗಳನ್ನು ಆಯ್ಕೆ ಮಾಡಲಾಯಿತು. ಅಲ್ಲದೆ ವಿವಿಧ ಸಮಿತಿಗಳನ್ನು ರಚಿಸಲಾಯಿತು .
ಆರ್ಥಿಕ ಸಮಿತಿ ಸಂಚಾಲಕರಾಗಿ ಶೈಲಜಾ ಪಿ. ಶೆಟ್ಟಿ, ಸಹಸಂಚಾಲಕರಾಗಿ ಪಾರ್ವತಿ ನಾರಾಯಣ, ಸುಶೀಲ ಚಂದ್ರಶೇಖರ, ಸುನಂದ ರೈ, ಸವಿತಾ ಸತೀಶ್ ಮತ್ತು ಜಯಲಕ್ಷ್ಮಿ ಉಮೇಶ್.
ಕ್ರೀಡಾ ಸಮಿತಿ ಸಂಚಾಲಕರಾಗಿ ಅಂಬಿಕಾ, ಸಹಸಂಚಾಲಕರಾಗಿ ನಮಿತಾ ಪದ್ಮನಾಭ, ರೋಹಿಣಿ ಕುಲದೀಪ್, ಸಂಧ್ಯಾ, ತೀರ್ಥ ಪ್ರಕಾಶ್, ಪವಿತ್ರ ಮುರಳಿ.
ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ಜಯಂತಿ ಆರ್. ರೈ, ಸಹಸಂಚಾಲಕರಾಗಿ ರಂಜಿನಿ ಸಂಜೀವ, ಹರಿಣಾಕ್ಷಿ, ತೃಪ್ತಿ ಚದ್ರಶೇಖರ, ರಮ್ಯ, ವಿನುತಾ,
ಕಾರ್ಯಕ್ರಮ ಸಂಯೋಜನಾ ಸಮಿತಿ ಸಂಚಾಲಕರಾಗಿ ಅನನ್ಯ ಅನಿಲ್, ಸಹಸಂಚಾಲಕರಾಗಿ ಭಾರತಿ ಬಂಟ್ವಾಳ್, ಸೌಮ್ಯ ಮಹೇಶ್, ಅನಿತಾ.
ವೇದಿಕೆ ಅಲಂಕಾರ ಸಮಿತಿ ಸಂಚಾಲಕರಾಗಿ ರಜನಿ ಶುಭಕರ , ಸಹಸಂಚಾಲಕರಾಗಿ ಕನಕಲತಾ, ಆಶಾಲತಾ, ರೇಖಾ ಸಂದೀಪ್, ಕಮಲ ಕಾನತ್ತಿಲ.
ಆಹಾರ ಮತ್ತು ಊಟೋಪಚಾರ ಸಮಿತಿ ಸಂಚಾಲಕರಾಗಿ ಸುನೀತಾ ರಮೇಶ್, ಸಹಸಂಚಾಲಕರಾಗಿ ರೇವತಿ ಗೋಪಾಲ್, ಪೂರ್ಣಿಮ ಜಟ್ಟಿಪಳ್ಳ, ರತಿ, ಯಶೋದಾ ಕುಂಞಿಕಣ್ಣ, ಮೀನಾಕ್ಷಿ, ಗಿರಿಜ ವಿ.ರೈ, ಉಮಾವತಿ ಕೃಷ್ಣ, ಚಂದ್ರಾವತಿ ಸಂಜೀವ, ನಾಗವೇಣಿ ಕಾನತ್ತಿಲ,
ಸ್ಮರಣ ಸಂಚಿಕೆ ಸಮಿತಿ ಸಂಚಾಲಕರಾಗಿ ವಿಜಯ ಪಾಲಾಕ್ಷ, ಸಹಸಂಚಾಲಕರಾಗಿ ಸುಮತಿ ರಘುನಾಥ್, ದೀಪಾ ವಿಜಯ್, ನವ್ಯ ಗೌಡ, ಜ್ಯೋತಿ ತನುದೀಪ್, ಜಯಶ್ರೀ ಕುಕ್ಕೆಟ್ಟಿ,
ಪ್ರಚಾರ ಸಮಿತಿ ಸಂಚಾಲಕರಾಗಿ ಭಾರತಿ ಬಂಟ್ವಾಳ್ ಆಯ್ಕೆಯಾದರು.