ಫೆ 28 : ಸುಳ್ಯ ನಾವೂರಿನಲ್ಲಿ ಸಯ್ಯಿದ್ ಅಲವಿ ತಂಙಳ್ ರವರ 24 ನೇ ಆಂಡ್ ನೇರ್ಚೆ ಹಾಗೂ ಸ್ವಲಾತ್ ವಾರ್ಷಿಕ

0

ಫೆ. 28 ರಂದು ಸುಳ್ಯದ ನಾವೂರಿನಲ್ಲಿ ಅಝ್ರತ್ ಸಯ್ಯಿದ್ ಅಲವಿ ತಂಙಳ್ (ವಲಿಯ ತಂಙಳ್) ರವರ 24ನೇ ವರ್ಷದ ಆಂಡ್ ನೇರ್ಚೆ ಹಾಗೂ ಸ್ವಲಾತ್ ವಾರ್ಷಿಕ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಂದು ಸಂಜೆ 4 ಗಂಟೆಗೆ ಮೌಲಿದ್ ಹಾಗೂ ಆತ್ಮೀಯ ಸಂಗಮ ನಡೆಯಲಿದ್ದು ಇದರ ನೇತೃತ್ವವನ್ನು ಸೈಯ್ಯಿದ್ ಕುಂಞಿ ಕೋಯ ಸಅದಿ ತಂಙಳ್ ಸುಳ್ಯ, ಪೂಕೋಯ ತಂಙಳ್, ಝೈನುಲ್ ಆಬಿದೀನ್ ತಂಙಳ್ ಜಯನಗರ,ಹಿಬತುಲ್ಲಾ ತಂಙಳ್ ಸುಳ್ಯ ಇವರು ನೇತೃತ್ವವನ್ನು ವಹಿಸಲಿದ್ದಾರೆ.

ರಾತ್ರಿ ಮಗರಿಬ್ ನಮಾಝ್ ಬಳಿಕ ಬುರ್ದಾ ಮಜ್ಲೀಸ್ ಹಾಗೂ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಪ್ರಭಾಷಣಕಾರರಾಗಿ ಖ್ಯಾತ ವಾಗ್ಮಿ ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು ಭಾಗವಹಿಸಿದ್ದಾರೆ.

ಅಲ್ಲದೆ ಈ ಸಮಾರಂಭದಲ್ಲಿ ಹಲವಾರು ಸಯ್ಯಿದರು,ಉಮರಾ ನೇತಾರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಣೆ ನಡೆಯಲಿದ್ದು ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶವನ್ನು ಕಲ್ಪಿಸಲಾಗುವುದು ಎಂದು ಸಂಘಟಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.