ಸಾಧಕರಾಗಲು ಭಗೀರಥ ಪ್ರಯತ್ನ ಅಗತ್ಯ : ರಾಜೇಶ್ ಪಡ್ಕೆ

0

“ಸ್ನೇಹ ಶಾಲಾ ಸಂಸ್ಥೆಯು ಪರಿಸರವನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿರುವುದು ಒಂದು ಭಗೀರಥ ಪ್ರಯತ್ನ. ನಾವು ಜೀವನದಲ್ಲಿ ಎಷ್ಟೇ ಏಟು ತಿಂದರೂ ತೊಂದರೆ ಇಲ್ಲ. ಆದರೆ ಕಷ್ಟಪಟ್ಟು ಚೆನ್ನಾಗಿ ದುಡಿಯಬೇಕು ಯಾವುದೇ ಉದ್ಯೋಗವಾದರೂ ಅದನ್ನು ಸರಿಸಮಾನವಾಗಿ ಕಾಣಬೇಕು. ವಿದ್ಯಾರ್ಥಿ ಜೀವನದಲ್ಲಿ ನಮ್ಮದೇ ಆದ ಸ್ವಂತಿಕೆಯನ್ನು ಬಳಸಿಕೊಂಡು ನಿರಂತರವಾಗಿ ಅಭ್ಯಾಸ ಮಾಡುತ್ತಾ, ಯಾವುದೇ ಕ್ಷೇತ್ರದಲ್ಲೂ ಮುನ್ನಡೆಯಿರಿ” ಎಂದು ಕೆಮ್ ಟ್ರೆಂಡ್ ಕಂಪನಿ ಬೆಂಗಳೂರು ಇದರ ನಿರ್ದೇಶಕರಾದ ರಾಜೇಶ್ ಪಡ್ಕೆಯವರು ಹೇಳಿದ್ದಾರೆ.

ಫೆ.24ರಂದು ಸ್ನೇಹ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ತಾಂತ್ರಿಕ ಮುಖ್ಯಸ್ಥ ಗಣೇಶ್ ರಾಜ್ ಶುಭಹಾರೈಸಿದರು.

ಅಧ್ಯಕ್ಷತೆಯನ್ನು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ವಹಿಸಿದ್ದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆಯವರು ಸ್ವಾಗತಿಸಿ, ಶಾಲಾ ಶಿಕ್ಷಕ ದೇವಿ ಪ್ರಸಾದ್ ಜಿ.ಸಿ. ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.