ಮಂಡೆಕೋಲು ಶಾಲೆಯಲ್ಲಿ ಅನ್ನಪೂರ್ಣ ಭೋಜನ ಶಾಲೆ ಉದ್ಘಾಟನೆ

0

ಉದ್ಯೋಗ ಖಾತ್ರಿ ಯೋಜನೆಯಲ್ಲಿ 7 ಲಕ್ಷ ರೂ ವೆಚ್ಚದಲ್ಲಿ ‌ನಿರ್ಮಾಣ

ಮಂಡೆಕೋಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಯೋಗ ಖಾತ್ರಿ ಯೊಜನೆಯ 7 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಅಕ್ಷರ ದಾಸೋಹ ಮತ್ತು ಅನ್ನಪೂರ್ಣ ಭೋಜನಾ ಶಾಲೆಯ ಉದ್ಘಾಟನೆಯು ಫೆ.29ರಂದು‌ ನಡೆಯಿತು.

ಶಾಸಕಿ‌ ಭಾಗೀರಥಿ ಮುರುಳ್ಯ‌ ನೂತನ ಕೊಠಡಿಯನ್ನು ಉದ್ಘಾಟಿಸಿದರು. ಬಳಿಕ ನೂತನ ಅಕ್ಷರ ದಾಸೋಹ ಕೊಠಡಿಯಲ್ಲಿ ಮಕ್ಕಳಿಗೆ ಶಾಸಕರು ಸಿಹಿ ಬಡಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಲ ಉದ್ದಂತಡ್ಕ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಕಾಶ್ ಕಣೆಮರಡ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ., ಅಕ್ಷರ ದಾಸೋಹ ಅಧಿಕಾರಿ ಶ್ರೀಮತಿ ವೀಣಾ ಎಂ.ಟಿ., ಪಂಚಾಯತ್ ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್, ಸದಸ್ಯರುಗಳಾದ ಅನಿಲ್ ತೋಟಪ್ಪಾಡಿ, ವಿನುತಾ ಪಾತಿಕಲ್ಲು, ದಿವ್ಯಲತಾ ಚೌಟಾಜೆ, ಗೀತಾ ಮೈಲೆಟ್ಟಿಪಾರೆ, ಉಷಾ ಗಂಗಾಧರ್, ಶಶಿಕಲಾ ಕುಂಟಿಕಾನ, ವಂಸತಿ, ಮಂಡೆಕೋಲು ಸಹಕಾರಿ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಪೇರಾಲುಗುತ್ತು, ಶಾಲಾ ಮುಖ್ಯ ಶಿಕ್ಷಕಿ ಮಂಜುಳಾ, ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಸುರೇಶ್ ಕಣೆಮರಡ್ಕ, ಮೋಹಿನಿ ಚಂದ್ರಶೇಖರ, ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ ಮೊದಲಾದವರಿದ್ದರು