ಸುಬ್ರಹ್ಮಣ್ಯ: ಕಾಲೇಜು ಮಕ್ಕಳ ಮೇಲೆ ಕಾರು ಹರಿದು ಗಾಯಗೊಂಡ ಮಕ್ಕಳಿಗೆ ಪರಿಹಾರ ವಿತರಣೆ

0

ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜು ಮಕ್ಕಳ ಮೇಲೆ ಕಾರು ಹರಿದು ಗಾಯಗೊಂಡ ಮಕ್ಕಳಿಗೆ ಮಾ.1 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ವತಿಯಿಂದ ಪರಿಹಾರ ವಿತರಣೆ ಮಾಡಲಾಯಿತು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾದ ಬಸವರಾಜೇಂದ್ರ ಎಚ್ ದೇವಾಲಯಕ್ಕೆ ಆಗಮಿಸಿದ್ದ ಸಂದರ್ಭ ಅವರು ಸ್ಥಳದಲ್ಲೇ ಆದೇಶ ಮಾಡಿದ್ದು ಪರಿಹಾರ ಚೆಕ್ ವಿತರಿಸಲಾಯಿತು. ಕಳೆದ ಕೆಲವು ತಿಂಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆಡಳಿತಕ್ಕೊಳಪಟ್ಟ ಎಸ್. ಎಸ್.ಪಿ.ಯು ಕಾಲೇಜಿನ ಮಕ್ಕಳು ಕಾಲೇಜು ಮುಗಿಸಿ ಮನೆಗೆ ನಡೆದುಕೊಂಡು ತೆರಳುತ್ತಿರುವಾಗ ಟೂರಿಸ್ಟ್ ವಾಹನ ವಿದ್ಯಾರ್ಥಿಗಳಿಗೆ ಹಿಂದಿನಿಂದ ಗುದ್ದಿ ಕಾಲು ಮುರಿತಕ್ಕೊಳಪಟ್ಟ ಘಟನೆ ನಡೆದಿತ್ತು. ಈ ಬಗ್ಗೆ ಸುಬ್ರಹ್ಮಣ್ಯ ಗ್ರಾಮ ಕಾಂಗ್ರೆಸ್ ವತಿಯಿಂದ ಗಾಯಗೊಂಡ ಮಕ್ಕಳ ಆಸ್ಪತ್ರೆ ಖರ್ಚನ್ನು ಭರಿಸುವಂತೆ ಮುಜುರಾಯಿ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಮನವಿ ಮಾಡಿದ್ದರು. ಇದೇ ವಿಚಾರವನ್ನು ರಾಜ್ಯ ಧಾರ್ಮಿಕ ಪರಿಷತ್ತ್ ನ ಸದಸ್ಯೆ ಮಲ್ಲಿಕಾ ಪಕಳ ಅವರು ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಪ್ರಸ್ತಾಪ ಮಾಡಿ ಸಚಿವರ ಮುಖಾಂತರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ವತಿಯಿಂದ ಪರಿಹಾರ ಹಣ ಪಾವತಿಸುವಂತೆ ಆದೇಶ ಮಾಡಿದ್ದರೆನ್ನಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಮಾ.1 ರಂದು ಆಗಮಿಸಿದ್ದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರ ಬಳಿ ಈ ವಿಚಾರ ಪ್ರಸ್ತಾಪಿಸಿಲಾಗಿದ್ದು ಮುಜುರಾಯಿ ಸಚಿವರ ಶಿಫಾರಸ್ಸಿನಂತೆ ಇಬ್ಬರು ಮಕ್ಕಳಿಗೆ ₹ 50 ಸಾವಿರ ರುಪಾಯಿ ಹಾಗೂ ಒರ್ವರಿಗೆ ₹ 10 ಸಾವಿರದ ಚೆಕ್ ಹಸ್ತಾಂತರ ಮಾಡಲಾಯಿತು.


ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಸದಸ್ಯರಾದ ಶ್ರೀವತ್ಸ ಬೆಂಗಳೂರು, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ಕಾರ್ಯನಿರ್ವಾಹಣಾಧಿಕಾರಿ ಡಾl ನಿಂಗಯ್ಯ, ಕಾಂಗ್ರೆಸ್ ನ
ಶಿವರಾಮ್ ರೈ, ಹರೀಶ್ ಇಂಜಾಡಿ, ಲೋಲಾಕ್ಷ ಕೈಕಂಬ, ಪವನ ಎಂ.ಡಿ, ಸತೀಶ್ ಕೂಜುಗೋಡು, ಕೃಷ್ಣಮೂರ್ತಿ ಭಟ್ ,ಅಶೋಕ್ ನೆಕ್ರಾಜೆ
ಉಜ್ವಲ್ ಕಜ್ಜೋಡಿ,
ಪ್ರಾಂಶುಪಾಲರಾದ ಸೋಮಶೇಖರ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.