20 ವರ್ಷಗಳ ಬಳಿಕ ಸಂಭ್ರಮದಿಂದ ನಡೆಯುತ್ತಿರುವ ಪೆರ್ಣೆ ಕಳಿಯಾಟ ಮಹೋತ್ಸವ

0

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಗಣ್ಯರ ಭೇಟಿ

ಮಾ.7 : ಶ್ರೀ ಮುಚ್ಚಿಲೋಟ್ ಭಗವತಿ ಅಮ್ಮನವರ ಸಿರಿಮುಡಿ ದರ್ಶನ

ಕಾಸರಗೋಡು ಜಿಲ್ಲೆಯ ಕುಂಬ್ಳೆ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಅಮ್ಮನವರ ಕಳಿಯಾಟ ಮಹೋತ್ಸವವು ಮಾ.1 ರಂದು ಆರಂಭಗೊಂಡಿದ್ದು, ಮಾ.7 ರವರೆಗೆ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ 2004ರಲ್ಲಿ ಕಳಿಯಾಟ ಮಹೋತ್ಸವವು ನಡೆದಿದ್ದು, ಇದೀಗ 20 ವರ್ಷಗಳ ನಂತರ ಮಾ.1 ರಂದು ಕಳಿಯಾಟ ಮಹೋತ್ಸವ ಆರಂಭಗೊಂಡಿದೆ.

ಮಾ.1 ರಂದು ಅನಂತಪುರ ಅನಂತ ಪದ್ಮನಾಭಸ್ವಾಮಿ ದೇವರ ಸನ್ನಿಧಾನದಿಂದ ಭಂಡಾರ ಆಗಮನ ಹಾಗೂ ಹಸಿರುವಾಣಿ ಮರವಣಿಗೆ ನಡೆಯಿತು. ನಂತರ ಕೊಡಿ ಎಲೆ ಇಡುವುದು ನಡೆದು, ಅಚ್ಚನ್ಮಾರರ ದರ್ಶನ, ಉಗ್ರಾಣ ತುಂಬಿಸುವುದು, ಅಕ್ಷಯ ಪಾತ್ರೆ ಇಡುವುದು ನಡೆಯಿತು.
ಅಪರಾಹ್ನ ತಂಬುರಾಟಿಯ ಮಧ್ಯಾಹ್ನ ಸ್ತೋತ್ರ, ಪುಲ್ಲೂರ್‌ಕಣ್ಣನ್ ದೈವದ ವೆಳ್ಳಾಟ ನಡೆದು ತಂಬುರಾಟಿ, ಕಣ್ಣಂಗಾಟ್ ಭಗವತಿ, ಪುಲ್ಲೂರ್‌ಕಾಳಿ ದೈವಗಳ ಸ್ತೋತ್ರ ನಡೆಯಿತು.

ಮಾ.2 ರಂದು ಬೆಳಿಗ್ಗೆ ಪುಲ್ಲೂರ್‌ಕಣ್ಣನ್, ಕಣ್ಣಂಗಾಟ್ ಭಗವತಿ, ಪುಲ್ಲೂರ್ ಕಾಳಿ ದೈವಗಳ ನರ್ತನ ನಡೆಯಿತು. ಸಂಜೆ ಕುತ್ಯಾಳ ತರವಾಡಿನಿಂದ ಬೀರ್ಣಾಳ್ವ ದೈವದ ಭಂಡಾರ ಆಗಮನವಾಗಿ, ಪುಲ್ಲೂರ್‌ಕಣ್ಣನ್ ದೈವದ ವೆಳ್ಳಾಟ ನಡೆಯಿತು. ನಂತರ ವಿಷ್ಣುಮೂರ್ತಿ ದೈವದ ತೊಡಂಙಲ್ ನಡೆದು ವಿಷ್ಣುಮೂರ್ತಿ ದೈವದ ಕುಳಿಚ್ಚಾಟ ನಡೆಯಿತು.

ಮಾ.3 ರಂದು ಬೆಳಿಗ್ಗೆ ಪುಲ್ಲೂರ್‌ಕಣ್ಣನ್ ದೈವದ ನರ್ತನವಾಗಿ ಅನಂತಪುರ ದೇವಸ್ಥಾನಕ್ಕೂ, ಯಜಮಾನರ ಮನೆಗೂ ಭೇಟಿ ನೀಡಿ, ನಂತರ ಕಣ್ಣಂಗಾಟ್ ಭಗವತಿ, ಪುಲ್ಲೂರ್‌ಕಾಳಿ ದೈವದ ನರ್ತನ ನಡೆಯಿತು. ಮಧ್ಯಾಹ್ನ ಬೀರ್ಣಾಳ್ವ ದೈವದ ನರ್ತನವಾಗಿ ಪ್ರಸಾದ ವಿತರಣೆ ನಡೆಯಿತು. ನಂತರ ವಿಷ್ಣುಮೂರ್ತಿ ದೈವದ ನರ್ತನವಾಗಿ ಮಾಯಿಪ್ಪಾಡಿ ಅರಮನೆಗೆ ಭೇಟಿ ನಡೆಯಿತು. ರಾತ್ರಿ ಪುಲ್ಲೂರು ಕಣ್ಣನ್, ವೇಟಕ್ಕೊರುಮಗನ್ ದೈವದ ವೆಳ್ಳಾಟ ನಡೆದು ಬಳಿಕ ವಿಷ್ಣುಮೂರ್ತಿ ದೈವದ ತೊಡಂಙಲ್ ಮತ್ತು ಕುಳಿಚ್ಚಾಟ ನಡೆಯಿತು.

ಮಾ.4 ರಂದು ಬೆಳಿಗ್ಗೆ ಪುಲ್ಲೂರುಕಣ್ಣನ್ ದೈವದ ನರ್ತನವಾಗಿ ಮಾಯಿಪ್ಪಾಡಿ ಅರಮನೆಗೆ ಬೇಟಿ ನೀಡುವುದು ನಡೆಯಿತು. ನಂತರ ಕಣ್ಣಂಗಾಟ್ ಭಗವತಿ, ಪುಲ್ಲೂರುಕಾಳಿ, ವೇಟಕ್ಕೊರುಮಗನ್ ದೈವದ ನರ್ತನ ನಡೆಯಿತು. ಸಂಜೆ ವಿಷ್ಣುಮೂರ್ತಿ ದೈವದ ನರ್ತನವಾಗಿ ಮಾಯಿಪ್ಪಾಡಿ ಅರಮನೆಗೆ ಭೇಟಿ ನಡೆಯಿತು. ಬಳಿಕ ಪುಲ್ಲೂರುಕಣ್ಣನ್ ದೈವದ ವೆಳ್ಳಾಟ ಹಾಗೂ ವಿಷ್ಣುಮೂರ್ತಿ, ಮೂವಾಳಂಕುಯಿ ಚಾಮುಂಡಿ ದೈವದ ತೊಡಂಙಲ್ ನಡೆದು, ವಿಷ್ಣುಮೂರ್ತಿ ದೈವದ ಕುಳಿಚ್ಚಾಟ ನಡೆಯಿತು.

ಮಾ.5 ರಂದು ಬೆಳಿಗ್ಗೆ ಪುಲ್ಲೂರುಕಣ್ಣನ್, ಕಣ್ಣಂಗಾಟ್ ಭಗವತಿ, ಪುಲ್ಲೂರುಕಾಳಿ ದೈವದ ನರ್ತನ ನಡೆಯಿತು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಗಣ್ಯರ ಭೇಟಿ
ಶ್ರೀ ಕ್ಷೇತ್ರಕ್ಕೆ ಮಾ.3 ರಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು. ಉಳಿದಂತೆ ಹೊರ ರಾಜ್ಯಗಳಿಂದ, ಸುತ್ತಮುತ್ತಲ ಜಿಲ್ಲೆಗಳಿಂದಲೂ ಅನೇಕ ಗಣ್ಯರು ಆಗಮಿಸುತ್ತಿದ್ದಾರೆ.

ಮಾ.7 ರಂದು ಶ್ರೀ ಮುಚ್ಚಿಲೋಟ್ ಭಗವತಿ ಅಮ್ಮನವರ ಸಿರಿಮುಡಿ ದರ್ಶನ

ಮಾ.6 ರಂದು ಬೆಳಿಗ್ಗೆ ಪುಲ್ಲೂರುಕಣ್ಣನ್, ಕಣ್ಣಂಗಾಟ್ ಭಗವತಿ ಮತ್ತು ಪಡಿಞರ್ ಚಾಮುಂಡಿ ದೈವದ ನರ್ತನ ನಡೆದು, ಮಧ್ಯಾಹ್ನ ತಚ್ಚಿಲೋನ್ ದೈವದ ವೆಳ್ಳಾಟ, ಸಂಜೆ ತಚ್ಚಿಲೋನ್ ಮತ್ತು ನಾಯನಾರ್ ದೈವಗಳ ನರ್ತನ ನಡೆಯಲಿದೆ. ರಾತ್ರಿ ದರ್ಶನದೊಂದಿಗೆ ಮೇಲೇರಿಗೆ ಕೊಳ್ಳಿ ತರುವುದು, ಅಗ್ನಿ ಸ್ಪರ್ಶ ನಡೆಯಲಿದೆ.

ಮಾ.7 ರಂದು ಬೆಳಿಗ್ಗೆ ನರಂಬಿಲ್ ಭಗವತಿ ದೈವದ ನಡೆದು, ಪುಲ್ಲೂರ್‌ಕಾಳಿ, ತೀಪಾತಿ ದೈವದ ನರ್ತನ ದೈವದ ನರ್ತನದ ಬಳಿಕ ಅಗ್ನಿಸೇವೆ ನಡೆಯಲಿದೆ.
ಬಳಿಕ ಶ್ರೀ ಮುಚ್ಚಿಲೋಟ್ ಭಗವತಿ ಅಮ್ಮನವರ ಸಿರಿಮುಡಿ ದರ್ಶನ ನಡೆದ ಬಳಿಕ ಪುಲ್ಲೂರ್‌ಕಾಳಿ ದೈವದೊಂದಿಗೆ ಭೇಟಿಯಾಗಿ ಪ್ರಸಾದ ವಿತರಣೆ ನಡೆಯಲಿದೆ.