ಸ. ಹಿ.ಪ್ರಾ. ಶಾಲೆ ದೇವಚಳ್ಳ ಶಾಲೆಯಲ್ಲಿ ಶತಮಾನೋತ್ಸವದ ಪ್ರಯುಕ್ತ ತರಗತಿ ಕೊಠಡಿಗಳಿಗೆ ಶಿಲಾನ್ಯಾಸ ಮತ್ತು ಹಿರಿಯ ವಿದ್ಯಾರ್ಥಿಗಳ ಮತ್ತು ಪೋಷಕರ ಸಮ್ಮಿಲನ ಹಾಗೂ ಕ್ರೀಡಾಕೂಟ ಮಾ.10ರಂದು ನಡೆಯಿತು.
ನೂತನ ಕೊಠಡಿಯ ಗುದ್ದಲಿ ಪೂಜೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ನೆರವೇರಿಸಿದರು.
ಸಭಾ ಸಮಾರಂಭದ ಅಧ್ಯಕ್ಷತೆಯನ್ನು ಶತಮಾನೋತ್ಸವ ಸಮಿತಿ ಅಧ್ಯಕ್ಷ ಎ.ವಿ ತೀರ್ಥರಾಮ ವಹಿಸಿದ್ದರು.
ವೇದಿಕೆಯಲ್ಲಿ ದೇವಚಳ್ಳ ಗ್ರಾ.ಪಂ.ನ ಸದಸ್ಯೆ ಪ್ರೇಮಲತ ಕೇರ , ನೆಲ್ಲೂರು ಕೆಮ್ರಾಜೆ ಗ್ರಾ. ಪಂ.ನ ಅಧ್ಯಕ್ಷ ಧನಂಜಯ ಕುಮಾರ್, ಗುತ್ತಿಗಾರು ಗ್ರಾ. ಪಂ. ಸದಸ್ಯ ವೆಂಕಟ್ ವಳಲಂಬೆ, ನೆಲ್ಲೂರು ಕೆಮ್ರಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ, ಎಸ್. ಡಿ.ಎಂ.ಸಿ ಅಧ್ಯಕ್ಷ ಜಯಾನಂದ ಪಟ್ಟೆ , ಉಪಾಧ್ಯಕ್ಷೆ ಶ್ರೀಮತಿ ಸವಿತಾ. ಸಿ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಪ್ರಸಾದ್ ಬಿ.ವಿ. ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯ ಶ್ರೀಧರ ಗೌಡ ಕೆ. ವಂದಿಸಿದರು. ಕಿರಣ ಗುಡ್ಡೆಮನೆ ಕಾರ್ಯಕ್ರಮ ನಿರೂಪಿಸಿದರು.
ಶತಮಾನೋತ್ಸವದ ವಿನಂತಿ ಪತ್ರವನ್ನು ಕು.ಭಾಗೀರಥೀ ಮುರುಳ್ಯ ಬಿಡುಗಡೆಗೊಳಿಸಿದರು. ಸಭೆಯಲ್ಲಿ ಕೋಶಾಧಿಕಾರಿಯಾದ ರಾಧಾಕೃಷ್ಣ ಶ್ರೀ ಕಟೀಲ್ ಆರ್ಥಿಕ ಸಮಿತಿಯ ಸಂಚಾಲಕರಾದ ಡಿ.ಟಿ ದಯಾನಂದ ಮತ್ತಿತರರು ಹಾಜರಿದ್ದರು. ಅಧ್ಯಕ್ಷರಾದ ಎ.ವಿ ತೀರ್ಥರಾಮರು 50,000ವನ್ನು ತನ್ನ ಮೊದಲ ಕಂತಾಗಿ ಘೋಷಿಸಿ ಆರ್ಥಿಕ ಸಮಿತಿಗೆ ಚಾಲನೆ ನೀಡಿದರು.
ಹಿರಿಯ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಕ್ರೀಡಾಕೂಟ ಏರ್ಪಡಿಸಲಾಯಿತು.