ಸುಳ್ಯದ ಜಟ್ಟಿಪಳ್ಳ ಬೊಳಿಯಮಜಲಿನ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ವಾರ್ಷಿಕ ನೇಮೋತ್ಸವಕ್ಕೆ ಉತ್ಸವ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ದೇವರಾಜ್ ಕುದ್ಪಾಜೆ ಆಯ್ಕೆಯಾಗಿದ್ದಾರೆ.
ಸಮಿತಿ ರಚನೆಯ ಉದ್ದೇಶದಿಂದ ಕರೆಯಲಾದ ಭಕ್ತರ ಸಭೆಯು ಮಾ.9 ರಂದು ಶ್ರೀಮತಿ ಕಜೆ ಚಂದ್ರಾವತಿ ನಾರಾಯಣ ಗೌಡರ ಮನೆ ಅಂಗಳದಲ್ಲಿ ನಡೆಯಿತು. ದಿನೇಶ್ ಮಡಪ್ಪಾಡಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, “ಇಲ್ಲಿ ಶಿರಾಡಿ ದೈವದ ಉತ್ಸವವು ಆರು ವರ್ಷಗಳಿಂದ ನಡೆಯುತ್ತಿದ್ದು, ದೈವಸ್ಥಾನವಿರುವ ಜಾಗವನ್ನು ಸ್ಥಳ ಮೊಕ್ತೇಸರರಾದ ಚಂದ್ರಾವತಿ ನಾರಾಯಣ ಗೌಡರು ದೈವಸ್ಥಾನದ ಹೆಸರಿಗೆ ನೀಡುತ್ತಿದ್ದಾರೆ. ಅದಕ್ಕಾಗಿ ಟ್ರಸ್ಟ್ ಅಥವಾ ಸಂಘವೊಂದನ್ನು ರಚಿಸಿಕೊಳ್ಳಬೇಕಾಗಿದೆ. ಅಲ್ಲದೆ ಪ್ರತಿವರ್ಷದಂತೆ ಈ ಬಾರಿಯೂ ನಡೆಯಲಿರುವ ವಾರ್ಷಿಕ ಉತ್ಸವಕ್ಕಾಗಿ ಉತ್ಸವ ಸಮಿತಿಯನ್ನು ಇಂದು ನಾವು ರಚಿಸಬೇಕು ” ಎಂದರು.
ಬಳಿಕ ಚರ್ಚೆ ನಡೆದು ಉತ್ಸವ ಸಮಿತಿಗೆ ದೇವರಾಜ್ ಕುದ್ಪಾಜೆಯವರನ್ನು ಅಧ್ಯಕ್ಷರನ್ನಾಗಿ ಆರಿಸಲಾಯಿತು. ಉಪಾಧ್ಯಕ್ಷರಾಗಿ ಗೋಪಾಲ ಬಳ್ಳಡ್ಕ ಮತ್ತು ಬುದ್ಧ ನಾಯ್ಕ್, ಕಾರ್ಯದರ್ಶಿಯಾಗಿ ಜಗದೀಶ್ ಪೂಜಾರಿ, ಜತೆ ಕಾರ್ಯದರ್ಶಿ ಯಾಗಿ ಶಂಕರ ಪಾಂಡಿ, ಕೋಶಾಧಿಕಾರಿಯಾಗಿ ಹವಪ್ಪ ಬಂಗಾರಕೋಡಿ ಆಯ್ಕೆಯಾದರು. ಗೌರವ ಸಲಹೆಗಾರರಾಗಿ ಎನ್.ಎ.ರಾಮಚಂದ್ರ, ಪಿ.ಕೆ.ಉಮೇಶ್, ವಿನಯಕುಮಾರ್ ಕಂದಡ್ಕ, ದೊಡ್ಡಣ್ಣ ಬರೆಮೇಲು, ಶುಭಕರ ಆಳ್ವ, ಆನಂದ, ರಾಜೇಶ್ ರೈ, ವೀರಪ್ಪ ಗೌಡ ಕಣ್ಕಲ್, ಹರೀಶ್ ಬಂಟ್ವಾಳ್ ಮತ್ತು ಜನಾರ್ದನ ದೋಳ ಆಯ್ಕೆಯಾದರು.
ಕಾಯರ್ತೋಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪಿ.ಕೆ.ಉಮೇಶ್ ಹಾಗೂ ನ.ಪಂ.ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ ಶುಭಹಾರೈಸಿ ಮಾತನಾಡಿದರು. ನವೀನ್ ಕಜೆ, ಡಾ.ಎಸ್.ರಂಗಯ್ಯ, ಮೋನಪ್ಪ ಅಡ್ಕಬಳೆ, ಕುಲದೀಪ್ ಪೆಲತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.