ನ್ಯಾಯಾಧೀಶ ಸೋಮಶೇಖರ್ ರವರಿಗೆ ಬಸವ ಶ್ರೀ ಪ್ರಶಸ್ತಿ ಪ್ರದಾನ

0

ಸುಳ್ಯದ ಮೂವರು ಮಹಿಳೆಯರಿಗೆ ಸಮಾಜರತ್ನ ಪ್ರಶಸ್ತಿ ಪ್ರದಾನ

ಸಮಾಜ ಸೇವೆಯಿಂದಲೇ ದೇಶ ಸೇವೆ ಸಾಧ್ಯ – ಗಣ್ಯರ ಅಭಿಮತ

ಶ್ರೀ ಜ್ಞಾನ ಮಂದಾರ ಟ್ರಸ್ಟ್ ಬೆಂಗಳೂರು, ಶ್ರೀ ಸಾಯಿ ರಾಮನ್ ನೃತ್ಯ ಕೇಂದ್ರ ತುಮಕೂರು ಇದರ ಸಹಭಾಗಿತ್ವದಲ್ಲಿ ಕನ್ನಡ ಕಲಾ ಪ್ರತಿಭೋತ್ಸವ ಇದರ ವತಿಯಿಂದ ನೀಡಲ್ಪಡುವ ‘ಬಸವ ಶ್ರೀ’ ಪ್ರಶಸ್ತಿಯನ್ನು ಜಿಲ್ಲಾ ನ್ಯಾಯಾಧೀಶ ಎ ಸೋಮಶೇಖರ್ ರವರಿಗೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ತುಮಕೂರು ಕನ್ನಡ ಭವನದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆಯನ್ನು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ ಎಸ್ ಸಿದ್ದಲಿಂಗಪ್ಪ ವಹಿಸಿದ್ದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿಗಮದ ಅಧ್ಯಕ್ಷ ಡಾll ಸೋಮಶೇಖರ್ ಸಿ ಪ್ರಶಸ್ತಿ ಪ್ರಧಾನವನ್ನು ನೆರವೇರಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನ್ಯಾಯಾಧೀಶರು, “ಸಮಾಜ ಸೇವೆಯ ಮೂಲಕ ದೇಶ ಸೇವೆಯನ್ನು ಮಾಡಲು ಸಾಧ್ಯ. ಸಾಧನೆಗೆ ಮೇಲು ಕೀಳು ಎಂಬ ಯಾವುದೇ ಭೇದ ಭಾವವಿರುವುದಿಲ್ಲ. ಸಾಧನೆಗೆ ಛಲ ಮುಖ್ಯ. ಜೀವನದಲ್ಲಿ ಉತ್ತಮ ಗುರಿಯನ್ನು ಹೊಂದಿದರೆ ಪ್ರತಿಯೊಬ್ಬ ನಾಗರಿಕರಿಂದಲೂ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ” ಎಂದು ಹೇಳಿದರು.


ವೇದಿಕೆಯಲ್ಲಿ ಚಲನಚಿತ್ರ ನಟಿ ಸಿಂಚನ ಪಿ. ರಾವ್, ತುಮಕೂರು ಸಿದ್ದಗಂಗಾ ತಾಂತ್ರಿಕ ಮಹಾ ವಿದ್ಯಾಲಯದ ಸಹಪಾಧ್ಯಾಪಕರಾದ ಸಾಗರ್ ಟಿ ಎಸ್, ಚಲನಚಿತ್ರ ನಿರ್ಮಾಪಕ ಶ್ರೀನಿವಾಸ್,ಬೆಂಗಳೂರು ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ವೀಣಾ ರಮೇಶ್, ಜ್ಞಾನ ಮಂದಾರ ಟ್ರಸ್ಟ್ ಸಂಸ್ಥಾಪಕ ಸೋಮಶೇಖರ್ ಎಚ್, ಸಮಿತಿ ಪದಾಧಿಕಾರಿ ನವೀನ್ ಮಚಾದೋ ಸುಳ್ಯ, ಶ್ರೀಮತಿ ರತಿಕಾ ಹಡಗಲಿ, ವಿದುಷಿ ಹರ್ಷಿತಾ ಎನ್ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭ ಸುಳ್ಯದ ಸಮಾಜ ಸೇವಕಿ ಜೂಲಿಯಾನ ಕ್ರಾಸ್ತ, ಗೃಹರಕ್ಷಕ ದಳದ ಹೋಂ ಗಾರ್ಡ್ ಶ್ರೀಮತಿ ಗೀತಾ ಹಾಗೂ ಪ್ರಾ.ಆ.ಕೇಂದ್ರ ಬೆಳ್ಳಾರೆ ಉಪವಿಭಾಗದ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಲೀಲಾವತಿ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಸಮಾಜರತ್ನ ಪ್ರಶಸ್ತಿ ಪ್ರಧಾನ ನಡೆಯಿತು.

ಒಲವಿನ ಮಂದಾರ ಹಾಗೂ ಬಾಳೊಂದು ಭಾವಗೀತೆ ಕೃತಿ ಬಿಡುಗಡೆ ಗೊಳಿಸಲಾಯಿತು.

ಶ್ರೀ ಸಾಯಿ ರಾಮನ್ ನೃತ್ಯ ಕೇಂದ್ರ ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳು ನಡೆಯಿತು.

ಶ್ರೀಮತಿ ಸುನಿತಾ ಎಂ, ಶ್ರೀಮತಿ ನಾಗವೇಣಿ ರಘುರಾಮ್ ಕಾರ್ಯಕ್ರಮ ನಿರೂಪಿಸಿದರು.