ಉಬರಡ್ಕ ಮಿತ್ತೂರು ಗ್ರಾಮದ ಅಮೈ ಕೊಡಿಯಾಲಬೈಲು ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಕಾಲಂಪ್ರತಿ ನಡೆಯುವ ಶ್ರೀ ವಿಷ್ಣುಮೂರ್ತಿ ದೈವದ ಬೈಲುಕೋಲವು ಎ.10 ಮತ್ತು ಎ.11 ರಂದು ಭಕ್ತಿ,ಸಂಭ್ರಮದಿಂದ ನಡೆಯಿತು.
ಎ.03 ರಂದು ಬೆಳಿಗ್ಗೆ ಗೊನೆ ಕಡಿಯಲಾಯಿತು.
ಎ.06 ರಂದು ಬೆಳಿಗ್ಗೆ ಪ್ರತಿಷ್ಠಾ ವಾರ್ಷಿಕೋತ್ಸವದ ತಂಬಿಲ ಸೇವೆ ನಡೆಯಿತು.
ಎ.10 ರಂದು ಬೆಳಿಗ್ಗೆ ಗಣಪತಿ ಹವನ,ಸಂಜೆ ಊರವರ ಕೂಡುವಿಕೆ ರಾತ್ರಿ ಕುಲ್ಚಾಟ ನಡೆಯಿತು.
ಎ.11 ರಂದು ಪ್ರಾತ:ಕಾಲ ಶ್ರೀ ವಿಷ್ಣುಮೂರ್ತಿ ದೈವದ ಕೋಲ ನಡೆದ ಬಳಿಕಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಸಮಿತಿಯ ಅಧ್ಯಕ್ಷ ರಾಮಕೃಷ್ಣ ಅಮೈ, ಗೌರವಾಧ್ಯಕ್ಷ ಪಿ.ಶಶಿಧರ ಶೆಟ್ಟಿ ಪಡ್ಪು, ಕಾರ್ಯದರ್ಶಿ ಪ್ರಭಾಕರ ಅಮೈ, ಖಜಾಂಜಿ ಲಕ್ಷ್ಮಣ ಗೌಡ ಕುದ್ಪಾಜೆ ಮತ್ತು ಆಡಳಿತ ಸಮಿತಿಯ ಸರ್ವ ಸದಸ್ಯರು,ಉತ್ಸವ ಸಮಿತಿಯ ಅಧ್ಯಕ್ಷ ರವಿಚಂದ್ರ ಕೊಡಿಯಾಲಬೈಲು, ಕಾರ್ಯದರ್ಶಿ ವಿನಯಚಂದ್ರ ಕೊಡಿಯಾಲಬೈಲು,ಖಜಾಂಜಿ ನಾರಾಯಣ ನಾಯ್ಕ ಕೊಡಿಯಾಲಬೈಲು ಮತ್ತು ಸರ್ವಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಭಜನಾ ಕಾರ್ಯಕ್ರಮ
ಎ.10 ರಂದು ರಾತ್ರಿ ಶ್ರೀ ವಿಷ್ಣು ಯುವಕ ಮಂಡಲ ಅಮೈ ಕೊಡಿಯಾಲ ಬೈಲು ಮತ್ತು ಶ್ರೀ ವರಲಕ್ಷ್ಮೀ ಯುವತಿ ಮಂಡಲ ಅಮೈ ಕೊಡಿಯಾಲಬೈಲು ಇವರಿಂದ ಭಜನೆ ನಡೆಯಿತು.
ಬಳಿಕ ರಾತ್ರಿ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಣೆ ನಡೆಯಿತು.
ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ
ರಾತ್ರಿ ಸಾಂಸ್ಕೃತಿಕ ಸಂಭ್ರಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಡಿಯಾಲಬೈಲು ಮತ್ತು ಅಂಗನವಾಡಿ ಕೇಂದ್ರ ಕೊಡಿಯಾಲಬೈಲು ಇವರಿಂದ ವಿವಿಧ ರೀತಿಯ ನೃತ್ಯ ಕಾರ್ಯಕ್ರಮ ನಡೆಯಿತು.
ನಂತರ ಶ್ರೀ ಬೆಂಕಿನಾಥೇಶ್ವರ ಕೃಪಾ ಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಬಾಳ,ಕಳವಾರು ಮಂಗಳೂರು ಇವರಿಂದ ಉದಯಕುಮಾರ್ ವಿರಚಿತ ಸತ್ಯೊದ ಸ್ವಾಮಿ ಕೊರಗಜ್ಜ ತುಳು ಕಥಾನಕ ನಡೆಯಿತು.ಎಲ್ಲಾ ಕಾರ್ಯಕ್ರಮಗಳು ಪ್ರೇಕ್ಷರನ್ನು ಮನರಂಜಿಸಿತು.