ಬಸವನಪಾದೆಯಿಂದ ಸುಳ್ಯ ಕಡೆಗೆ ಹೋಗುವ 250ಮೀಟರ್ ರಸ್ತೆ ಕಾಂಕ್ರೀಟ್ ಮಾಡಲು ಗುದ್ದಲಿ ಪೂಜೆಯನ್ನು ನೆರವೇರಿಸಿ ಒಂದು ತಿಂಗಳು ಕಳೆದರೂ ಇದ್ದ ರಸ್ತೆಯನ್ನು ಅಗೆದು ಹಾಕಿ ಇಲ್ಲಿರುವ ಜನರಿಗೆ ವಾಸಿಸಲು ಯೋಗ್ಯವಾಗದ ವಾತಾವರಣವನ್ನು ನಿರ್ಮಿಸಿ, ಜನರಿಗೆ ಅನಾರೋಗ್ಯವನ್ನು ಉಂಟುಮಾಡಿದ್ದಾರೆ ಮತ್ತು ಅವರ ಅವರ ಕಸುಬುಗಳನ್ನು ಮಾಡಲು ಅಸಾಧ್ಯವಾಗಿರುತ್ತದೆ.
ಇಲ್ಲಿಯ ಜನರ ಆರೋಗ್ಯಕ್ಕೂ ಹಾಗೂ ದ್ವಿಚಕ್ರ ವಾಹನ ಚಾಲಕರ ಪಾಡು ಹೇಳತೀರದು. ಇಷ್ಟು ಚಿಕ್ಕ ಕಾಮಗಾರಿಗೆ ಚುನಾವಣಾ ಕುಂಟು ನೆಪ ಇಟ್ಟುಕೊಂಡು ಇನ್ನು ಸಮಯ ಕಳೆಯುತ್ತಿದ್ದಾರೆ.
ಇದನ್ನು ಸಂಭಂದಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜನರಿಗೆ ತೊಂದರೆ ಆಗದ ರೀತಿಯಲ್ಲಿ ಕೂಡಲೇ ಸರಿಪಡಿಸಿ ಕೊಡಬೇಕಾಗಿ ವಿನಂತಿ.
ನೊಂದ ಜನರು ಬಸವನಪಾದೆ, ದೊಡ್ಡೇರಿ, ಮುಳ್ಯ ಫಲಾನುಭವಿಗಳು.