ವಿದ್ಯಾಮಾತಾ ಅಕಾಡೆಮಿಯಿಂದ ವಿ ಎ ಓ , ಪಿ .ಡಿ.ಓ ನೇಮಕಾತಿಗೆ ಆನ್ಲೈನ್ ತರಬೇತಿ ಪ್ರಾರಂಭ

0

ಒಂದೇ ವೇದಿಕೆಯಲ್ಲಿ ಎರಡೂ ನೇಮಕಾತಿ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಅವಕಾಶ

೧೨೦ಕ್ಕೂ ಅಧಿಕ ಅಭ್ಯರ್ಥಿಗಳನ್ನು ಸರಕಾರಿ ಉದ್ಯೋಗಸ್ಥರನ್ನಾಗಿಸಿದ ಪ್ರತಿಷ್ಠಿತ ಸಂಸ್ಥೆ ವಿದ್ಯಾಮಾತಾ ಇದರ ವತಿಯಿಂದ ವಿ.ಎ.ಒ ಮತ್ತು ಪಿ.ಡಿ.ಓ ನೇಮಕಾತಿ ಪರೀಕ್ಷಾ ತರಬೇತಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

ಸ್ಥಳೀಯ ಮಟ್ಟದಲ್ಲಿ ಉದ್ಯೋಗವನ್ನು ಅರಸುತ್ತಿರುವ ಯುವ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ಪ್ರಾರಂಭವಾಗಿರುವ ಗಿಂಔ ಮತ್ತು Pಆಔ ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಮತ್ತು ಅರ್ಜಿ ಸಲ್ಲಿಸಲು ಉದ್ದೇಶಿಸಿರುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸದ್ರಿ ಎರಡೂ ನೇಮಕಾತಿ ಪರೀಕ್ಷೆಯ ಪೂರ್ವ ತಯಾರಿ ತರಬೇತಿಯನ್ನು ವಿದ್ಯಾಮಾತಾ ಅಕಾಡೆಮಿಯು ಒಂದೇ ವೇದಿಕೆಯಲ್ಲಿ ಏ. ೨೧ ರಿಂದ ಆನ್ಲೈನ್ ಪ್ರಾರಂಭಿಸಲಿದೆ.
ತರಗತಿಗಳು ಎರಡುವರೆ ತಿಂಗಳ ಕಾಲ ಪ್ರತಿನಿತ್ಯ ರಾತ್ರಿ ೭ರಿಂದ ೮ರವರೆಗೆ ನಡೆಯಲಿದ್ದು , ಆಸಕ್ತರು ಈ ಕೆಳಗಡೆ ನೀಡಿರುವ ದೂರವಾಣಿ ಸಂಖ್ಯೆ ಅಥವಾ ಅಕಾಡೆಮಿಯ ಕಚೇರಿಯನ್ನು ಖುದ್ದಾಗಿ ಬೇಟಿ ನೀಡಿ ದಾಖಲಾತಿಯನ್ನು ಪಡೆದುಕೊಳ್ಳಬಹುದು ಎಂದು ವಿದ್ಯಾಮಾತಾ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

ನೇಮಕಾತಿಯ ಅರ್ಹತಾ ಮಾನದಂಡಗಳು :

ಗ್ರಾಮ ಆಡಳಿತ ಅಧಿಕಾರಿ ಹುದ್ದೆ(ಗಿಂಔ)ಗೆ ೨೧ ರಿಂದ ೪೨ ಸಾವಿರ ವೇತನ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ೩೭ ಸಾವಿರದಿಂದ ೭೦ ಸಾವಿರ ವೇತನ.

ವಿದ್ಯಾರ್ಹತೆ: ವಿ.ಎ.ಓ.ಹುದ್ದೆಗೆ ಪಿ ಯು ಸಿ, ಡಿಪ್ಲೋಮ, ಐ ಟಿ ಐ. ಆಗಿರಬೇಕು ಹಾಗೂ ಪಿ.ಡಿ.ಓ. ಹುದ್ದೆಗೆ ಯಾವುದೇ ಪದವಿ.

ವಯೋಮಿತಿ
ಸಾಮಾನ್ಯ ಅಭ್ಯರ್ಥಿ: ೩೫ ವರ್ಷ
ಒಬಿಸಿ: ೩೮ವರ್ಷ
ಎಸ್ ಸಿ , ಎಸ್ ಟಿ: ೪೦ವರ್ಷ

ಹೆಚ್ಚಿನ ಮಾಹಿತಿಗಾಗಿ

ವಿದ್ಯಾಮಾತಾ ಅಕಾಡೆಮಿ ಪುತ್ತೂರು ಶಾಖೆ ದೂರವಾಣಿ
9148935808 , 96204 68869
ಅಥವಾ
ಸುಳ್ಯ ಶಾಖೆ
Pಊ: 9448527606 ಸಂಪರ್ಕಿಸಬಹುದು.