ಬಿಜೆಪಿಯದ್ದು ಸೆಲೆಕ್ಟೆಡ್ ಹಿಂದುತ್ವ : ಎಸ್.ಡಿ.ಪಿ.ಐ. ಜತೆ ಬಿಜೆಪಿ ಹೊಂದಾಣಿಕೆಗೆ ಚರಿತ್ರೆಯೇ ಇದೆ

0

ರಾಮೇಶ್ಚರ ಕೆಫೆ ಬಾಂಬ್ ಸ್ಪೋಟ : ಬಿಜೆಪಿ ಪದಾಧಿಕಾರಿ ಬಂಧನವಾಗಿಲ್ಲವೇ?

ಸೌಜನ್ಯ ತಾಯಿಗೆ ಪ್ರಧಾನಿ ಮೋದಿ ಭೇಟಿ ಅವಕಾಶ ಬಿಜೆಪಿ ಯಾಕೆ ಕಲ್ಪಿಸಿಲ್ಲ?

ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಎನ್.ಜಯಪ್ರಕಾಶ್ ರೈ ಪತ್ರಿಕಾಗೋಷ್ಠಿ

ರಾಜ್ಯದಲ್ಲಿ ನುಡಿದಂತೆ ನಡೆದ ಕಾಂಗ್ರೆಸ್ ಸರಕಾರ ಇರುವುದರಿಂದ ಕೇಂದ್ರದಲ್ಲಿಯೂ ಈ ಬಾರಿ ಅಧಿಕಾರಕ್ಕೆ ಬಂದರೆ ಲೋಕಸಭಾ ಚುನಾವಣೆಯ ಸಂದರ್ಭ ನೀಡಿದ ಘೀಷಣೆಯನ್ನು ಈಡೇರಿಸುತ್ತೇವೆ. ಬಿಜೆಪಿಯವರು ಏನು ಅಭಿವೃದ್ಧಿ ಮಾಡದೇ ಇದೀಗ ಚುನಾವಣೆಯ ಈ ಕೊನೆ ಘಳಿಕೆಯಲ್ಲಿ ಕೋಮುವಾದವನ್ನು ಎತ್ತಿಹಿಡಿಯುವ ಮೂಲಕ ಹಳೆ ಟ್ರ್ಯಾಕ್ ಗೆ ಅವರು ಮರಳಿದ್ದಾರೆ ಎಂದು ಕಾಂಗ್ರೆಸ್ ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ ಹೇಳಿದ್ದಾರೆ.

ಎ.23ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಹತ್ಯೆಗಳಂತಹ ಎಲ್ಲ ಘಟನೆಗಳನ್ನು ಕಾಂಗ್ರೆಸ್ ಸಮರ್ಥನೆ ಮಾಡುವುದಿಲ್ಲ. ಎಲ್ಲವನ್ನು ಖಂಡಿಸುತ್ತೇವೆ. ಹಂತಕ ರಿಗೆ ಕಠಿಣ ಶಿಕ್ಷೆ ಆಗಬೇಕು. ಆದರೆ ಬಿಜೆಪಿಗರು ಮಾತ್ರ ಸೆಲೆಕ್ಟೆಡ್ ವಿಷಯದ ಕುರಿತು ಮಾತನಾಡುತ್ತಾರೆ. ನೇಹಾ ಹತ್ಯೆಯ ಬಗ್ಗೆ ಮಾತನಾಡುವ ‌ಬಿಜೆಪಿಗರು, ಸೌಜನ್ಯ ಪ್ರಕರಣದಲ್ಲಿ ಅವರ ನಿಲುವು ಏನು? ಕೆಲ ವರ್ಷಗಳ ಹಿಂದೆ ಸುಳ್ಯದ ರಥಬೀದಿಯಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಕೊಲೆ ಮಾಡಲಾಗಿತ್ತು. ಪುತ್ತೂರಿನಲ್ಲಿಯೂ ಘಟನೆ ನಡೆದಿದೆ. ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಲಾಗಿದೆ. ಇದರ ಬಗ್ಗೆ ಯಾಕೆ ಮಾತನಾಡುತಿಲ್ಲ. ಅವರದ್ದು ಸೆಲೆಕ್ಟೆಡ್ ಹಿಂದುತ್ವನಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಎಸ್.ಡಿ.ಪಿ.ಐ. ಜತೆ ಹೊಂದಾಣಿಕೆ ಮಾಡಿಲ್ಲ. ಹೊಂದಾಣಿಕೆ ಮಾಡಿದ ಚರಿತ್ರೆ ಇರುವುದೇ ಬಿಜೆಪಿಯವರದ್ದು. ಇದನ್ನು ನಾವು ನೋಡಿದ್ದೇವೆ. ಕಾಶ್ಮೀರದಲ್ಲಿ ಮುಫ್ತಿ ಜೊತೆ ಹೊಂದಾಣಿಕೆ ಮಾಡಿದ್ದು ಯಾರು? ಎಂದವರು ಪ್ರಶ್ನಿಸಿದರು.

ಕುಕ್ಕರ್ ಬಾಂಬ್ ಸ್ಪೋಟದ ಬಗ್ಗೆ ಮಾತನಾಡುವ ಬಿಜೆಪಿಯವರು ಆ ಸಂದರ್ಭದಲ್ಲಿ ಅವರದ್ದೇ ಸರಕಾರ ಇದ್ದುದು ಎಂದು ಮರೆತಿದೆಯಾ?. ಅದರಲ್ಲಿ ಗಾಯಗೊಂಡ ವ್ಯಕ್ತಿಯೆ ಮನೆ ಕಟ್ಟಿ ಕೊಟ್ಟದ್ದು ನಮ್ಮ ಅಭ್ಯರ್ಥಿ ಪದ್ಮರಾಜ್ ರವರೇ ಹೊರತು ಬಿಜೆಪಿಗರಲ್ಲ. ರಾಮೇಶ್ವರ ಕೆಫೆ ಬಾಂಬ್ ಸ್ಪೋಟಾ ಪ್ರಕರಣದಲ್ಲಿ ಬಿಜೆಪಿ ಜಿಲ್ಲಾ ಪದಾಧಿಕಾರಿ ಕಾರ್ತಿಕ್ ಎಂಬಾತನನ್ನು ವಶಕ್ಕೆ ಪಡೆದದ್ದು ಬಿಜೆಪಿ ಯಾಕೆ ಮಾತನಾಡುತಿಲ್ಲ ಎಂದು ಜೆ.ಪಿ ರೈಯವರು ಕೇಳಿದರು.

ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮಾಡದ ಬಿಜೆಪಿಗರಿಗೆ ಚುನಾವಣೆ ಗೆ ವಿಷಯವೇ ಇಲ್ಲ. ಮೋದಿ ಜನಪ್ರಿಯತೆಯೂ ಕುಸಿದಿದೆ. ಆದ್ದರಿಂದ ಕೋಮುವಾದದ ಹೇಳಿಕೆ ನೀಡುತಿದ್ದಾರೆ ಎಂದ ಅವರು ದಲಿತರ ಬಗ್ಗೆ ಮಾತನಾಡುವ ಬಿಜೆಪಿಗರಿಗೆ 30 ವರ್ಷದಿಂದ ಸುಳ್ಯದಲ್ಲಿ ಅಂಬೇಡ್ಕರ್ ಭವನ ಮಾಡಲು ಆಗಿಲ್ಲ ಎಂದು ಹೇಳಿದರು.

ಸುಳ್ಯದಲ್ಲಿ 60 ಸಾವಿರ ಲೀಡ್ ಬರುತ್ತದೆ ಎನ್ನುವ ಬಿಜೆಪಿಗರು ಇನ್ನೂ ಭ್ರಮೆ ಯಲ್ಲೇ ಮುಳುಗಿದ್ದಾರೆ.
ಬಿಜೆಪಿಯ ಲೀಡ್ ಈ‌ಬಾರಿ ಇಳಿಕೆಯಾಗಲಿದೆ. ನಾವು ಪ್ರತೀ ಬೂತ್ ನಲ್ಲಿ 50 ರಿಂದ 100 ಮತಗಳ ಹೆಚ್ಚಳಕ್ಕೆ ಪ್ರಯತ್ನ ಮಾಡಿದ್ದೇವೆ. ಈಗಾಗಲೇ ಮನೆ ಭೇಟಿ ಮಾಡಲಾಗಿದ್ದು ಉತ್ತಮ ಪ್ರತಿಕ್ರಿಯೆ ಇದೆ
ಈ ಬಾರಿ ಜಿಲ್ಲೆಯಲ್ಲಿ ಬದಲಾವಣೆಯ ವಾತಾವರಣವೂ ಇದೆ. ಗ್ಯಾರಂಟಿ ಯೋಜನೆಗಳು ಪ್ರತೀ ಮನೆಗೆ ತಲುಪಿದೆ. ನಮ್ಮ ಅಭ್ಯರ್ಥಿ ಧಾರ್ಮಿಕವಾಗಿ ಹಿಂದೂಪರವಾಗಿ ಕೆಲಸ ಮಾಡಿದ ವ್ಯಕ್ತಿ. ಈ ಬಾರಿ ಪದ್ಮರಾಜ್ ಆಯ್ಕೆ ಯಾಗಲಿದ್ದಾರೆ ಎಂದು ಅವರು‌ ಹೇಳಿದರು.

ಸೌಜನ್ಯ ಹೋರಾಟದಲ್ಲಿ ಕಾಂಗ್ರೆಸ್ ತೊಡಗಿಸಿಕೊಂಡಷ್ಟು ಬಿಜೆಪಿ ಅವರ ಜತೆ ನಿಂತಿಲ್ಲ. ಮೊನ್ನೆ ಪ್ರಧಾನಿಯವರು ಬಂದಾಗ ಪ್ರವೀಣ್ ನೆಟ್ಟಾರು ತಾಯಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಸೌಜನ್ಯ ತಾಯಿಯನ್ನು ಯಾಕೆ ಭೇಟಿ‌ ಮಾಡಿಸಿಲ್ಲ. ಹೆಣ್ಣು ಮಕ್ಕಳ ಇಷ್ಟೆಲ್ಲ ಮಾತನಾಡುವ ಬಿಜೆಪಿಗರಿಗೆ ಇದು ಯಾಕೆ ಸಾಧ್ಯ ಆಗಿಲ್ಲ. ಇದನ್ನು ಜನರು ಗಮನಿಸಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ಶಶಿಧರ್ ಮಾತನಾಡಿ, ನಗರದ ನೀರಿನ ಕಾಮಗಾರಿ ಅವ್ಯವಸ್ಥೆ, ದಾರಿ ದೀಪ, ರಸ್ತೆ ಅಭಿವೃದ್ಧಿ ಇತ್ಯಾದಿ ಕಾಮಗಾರಿ ಆಗದಿರುವ ಬಗ್ಗೆ ಪ್ರಶ್ನಿಸಿದರಲ್ಲದೆ, ಸುಳ್ಯ‌ನಗರ ಪಂಚಾಯತ್ ನಲ್ಲಿ ಭ್ರಷ್ಟಾಚಾರ ಮಿತಿ‌ಮೀರಿದೆ. ಜನಪ್ರತಿನಿಧಿಗಳು ಯಾಕೆ ಮೌನ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಸ್ತಫಾ ಮಾತನಾಡಿ, ಗ್ಯಾರಂಟಿ ಯೋಜನೆ ಘೋಷಣೆಯ ಆ ಸಂದರ್ಭ ಶೇ.8 ಮತ ನಮಗೆ ಹೆಚ್ಚಿಗೆ ಬಂದಿತ್ತು.‌ಈಗ ಅನುಷ್ಠಾನ ಗೊಂಡು ಎಲ್ಲರಿಗೂ ಸಿಗುತ್ತಿದೆ. ಈಗ ಎಲ್ಲ ಕಡೆ ನಮ್ಮ ಅಭ್ಯರ್ಥಿ ಗೆಲ್ಲವುದು ಗ್ಯಾರಂಟಿ. ಬಿಜೆಪಿ ಸರಕಾರ ಜನರಿಗೆ ಕೊಟ್ಟದ್ದು ಚೊಂಬು ಮಾತ್ರ. ಅವರು ಫೀಲ್ಡ್ ಹೋದಾಗ ಅವರಿಗೆ ಈ ಬಗ್ಗೆ ಅನುಭವ ಆದುದು ನಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದರು.

ನ.ಪಂ. ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ಕಾಂಗ್ರೆಸ್ ಬ್ಲಾಕ್ ಉಪಾಧ್ಯಕ್ಷ ಕೆ.ಗೋಕುಲ್ ದಾಸ್, ಮಾಧ್ಯಮ ವಕ್ತಾರ ನಂದರಾಜ ಸಂಕೇಶ, ಇಂಟೆಕ್ ಕಾಂಗ್ರೆಸ್ ಸುಳ್ಯ ವಿಧಾನಸಭಾ ಕ್ಷೇತ್ರಾಧ್ಯಕ್ಷ ಶಾಫಿ ಕುತ್ತಮೊಟ್ಟೆ, ಕಾಂಗ್ರೆಸ್ ಎಸ್.ಟಿ. ಘಟಕದ ಜಿಲ್ಲಾ ಉಪಾಧ್ಯಕ್ಷ ಭವಾನಿಶಂಕರ್ ಕಲ್ಮಡ್ಕ ಇದ್ದರು.