ಶ್ರೀಮತಿ ಲೀಲಾವತಿ ನರಿಯೂರು ಹೃದಯಾಘಾತದಿಂದ ನಿಧನ

0

ಕನಕಮಜಲು ಗ್ರಾಮದ ನರಿಯೂರು ದಿ. ಪಟೇಲ್ ಗುಡ್ಡಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಲೀಲಾವತಿ ನರಿಯೂರು ಅವರು ಹೃದಯಾಘಾತದಿಂದ ಎ.24ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.

ಮನೆಯಲ್ಲಿ ಆರೋಗ್ಯದಿಂದ ಇದ್ದ ಅವರು ಸಂಜೆ ಮನೆಯಲ್ಲಿ ಸ್ನಾನ ಮಾಡಿ ಬಂದು ಮಂಚದಲ್ಲಿ ಕುಳಿತುಕೊಂಡವರು ತೀವ್ರ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು, ಮೃತಪಟ್ಟರೆಂದು ತಿಳಿದುಬಂದಿದೆ.

ಮೃತರು ಪುತ್ರರಾದ ಎನ್.ಜಿ. ರಾಮಚಂದ್ರ ನರಿಯೂರು, ಎನ್.ಜಿ. ಕೇಶವಾನಂದ ನರಿಯೂರು, ಎನ್.ಜಿ. ಉಮೇಶ್ಚಂದ್ರ ನರಿಯೂರು, ಎನ್.ಜಿ. ಚಂದ್ರಶೇಖರ ನರಿಯೂರು, ಪುತ್ರಿಯರಾದ ಶ್ರೀಮತಿ ತಿಲೋತ್ತಮೆ, ಶ್ರೀಮತಿ ಚಂದ್ರಕಲಾ, ಶ್ರೀಮತಿ ವಿಜಯಕುಮಾರಿ, ಶ್ರೀಮತಿ ಪುಷ್ಪಾವತಿ ಸೇರಿದಂತೆ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.