ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಲೀಲಾವತಿ ಎಂ.ರವರು ಎ.30ರಂದು ನಿವೃತ್ತಿ ಯಾಗಲಿದ್ದಾರೆ.
ಇವರು ಐವರ್ನಾಡು ಗ್ರಾಮದ ಮಿತ್ತಮೂಲೆ ದಿ.ಎಂ. ನಾಗಪ್ಪ ಗೌಡ ಮತ್ತು ದಿ.ಲಿಂಗಮ್ಮ ದಂಪತಿಯ ಪುತ್ರಿ.
ಲೀಲಾವತಿ ಯವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ. ಪ್ರಾ. ಶಾಲೆ ಐರ್ವನಾಡು ಇಲ್ಲಿ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆಯಲ್ಲಿ, ಬಿ.ಕಾಂ ಪದವಿಯನ್ನು ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿ ಪೂರೈಸಿದ್ದಾರೆ.
1-10-1988 ರಲ್ಲಿ ಐವರ್ನಾಡು ಮಂಡಲ ಪಂಚಾಯತ್ ನಲ್ಲಿ ಗುಮಾಸ್ತ ಹುದ್ದೆಗೆ ಸೇರಿ ವೃತ್ತಿ ಜೀವನ ಆರಂಭಿಸಿದ ಲೀಲಾವತಿಯವರು 31- 3 -1999 ಕ್ಕೆ ಸರಕಾರಿ ನೌಕರಳಾಗಿ ಕಾರ್ಯದರ್ಶಿ ಗ್ರೇಡ್- 2 ಹುದ್ದೆಗೆ ದೇವಚಳ್ಳ ಗ್ರಾಮ ಪಂಚಾಯತ್ ಗೆ ನೇಮಕಗೊಂಡರು.
ಅದೇ ಸಂದರ್ಭ ವಾರದಲ್ಲಿ ಮೂರು ದಿನ ತಾಲೂಕು ಪಂಚಾಯಿತ್ ನಲ್ಲಿ ವಸತಿ ಯೋಜನೆಗಳ ಕೆಲಸಗಳನ್ನು ನಿರ್ವಹಿಸಿದ್ದಾರೆ.
2006- 2007 ಕ್ಕೆ ಜಾಲ್ಸೂರು ಗ್ರಾಮ ಪಂಚಾಯಿತ್ ಕಾರ್ಯದರ್ಶಿಯಾಗಿ ವರ್ಗಾವಣೆಗೊಂಡು, 2007- 20೦8ರಲ್ಲಿ ಕೊಡಿಯಾಲ ಗ್ರಾಮ ಪಂಚಾಯತ್ ನಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
13 -7- 2008 ರಿಂದ ನಿಯೋಜನೆಯಲ್ಲಿ ತಾಲೂಕು ಪಂಚಾಯತ್ ನಲ್ಲಿ ವಸತಿ ಯೋಜನೆಗಳ ವಿಷಯ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿ,
2013ರಲ್ಲಿ ಪಂಚಾಯತ್ ಗ್ರೇಡ್ 2 ಕಾರ್ಯದರ್ಶಿಯಿಂದ ಪದೋನ್ನತ್ತಿ ಹೊಂದಿ ಪಂಚಾಯತ್ ಗ್ರೇಡ್-1 ಕಾರ್ಯದರ್ಶಿಯಾಗಿ ಆಲೆಟ್ಟಿ ಗ್ರಾಮ ಪಂಚಾಯಿತ್ ಗೆ ಪದೋನ್ನತಿ ಹೊಂದಿ, ಬಳಿಕ ನಿಯೋಜನೆಯಲ್ಲಿ ವಿಷಯ ನಿರ್ವಾಹಕರಾಗಿ ತಾಲೂಕು ಪಂಚಾಯತ್ ನಲ್ಲಿ ಕರ್ತವ್ಯ ಸಲ್ಲಿಸಿದ್ದಾರೆ.
2018ರಲ್ಲಿ ಪದನ್ನೋತಿ ಹೊಂದಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ನೆಲ್ಲೂರು ಕೆಮ್ರಾಜೆ ಪಂಚಾಯಿತ್ ಗೆ ನೇಮಕಗೊಂಡರು. ಒಟ್ಟು 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಲೀಲಾವತಿಯವರು ಅರುವಗುತ್ತು ಕುಂಬ್ಲಾಡಿ ಮನೆತನದ ಕುಕ್ಕುಜಡ್ಕ ನಿವಾಸಿ, ಅಂಚೆಪಾಲಕ ಸಿ.ಕೆ. ವೆಂಕಟೇಶ್ ರವರ ಪತ್ನಿ.
ಪುತ್ರ ಸಂಜೀತ್ ಸಿ.ವಿ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಧರನಾಗಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾನೆ. ಪುತ್ರಿಯರಾದ ಸಂಗೀತಾ ಸಿ.ವಿ. ಎಂ.ಎ. ಬಿ.ಎಡ್ ಶಿಕ್ಷಣವನ್ನು ಪೂರೈಸಿರುತ್ತಾಳೆ. ಸಂಚಿತಾ ಸಿ.ವಿ. ಇವಳು ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಾಳೆ. ಪುತ್ರಿಯಾದ ಸಂಹಿತಾ ಸಿ.ವಿ. ಎಂ.ಕಾಂ ಪದವಿಧರೆಯಾಗಿದ್ದು ಗಿರಿಪ್ರಸಾದ್ ಕೋಲ್ಪೆಯೊಂದಿಗೆ ವಿವಾಹವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.