ಕೊಡಗು ಸಂಪಾಜೆ ಗ್ರಾಮದ ಕೊಯನಾಡಿನ ಗುಡ್ಡಗದ್ದೆಯಲ್ಲಿರುವ ಶ್ರೀ ಮಲೆಚಾಮುಂಡೇಶ್ವರಿ ದೈವಸ್ಥಾನದಲ್ಲಿ ಬ್ರಹ್ಮಶ್ರೀ ಶಂಕರನಾರಾಯಣ ಕಡಮನ್ನಾಯ (ಕರ್ಕುಳ ಬೂಡು) ತಂತ್ರಿಗಳ ನೇತೃತ್ವದಲ್ಲಿ ಶ್ರೀ ಮಲೆಚಾಮುಂಡೇಶ್ವರಿ ಹಾಗೂ ಗುಳಿಗ ದೈವದ ಪ್ರತಿಷ್ಠಾ ಕಾರ್ಯಕ್ರಮ ಹಾಗೂ ದೈವಗಳ ನಡಾವಳಿಯು ಮೇ.2ರಿಂದ 4ರವರೆಗೆ ಜರುಗಲಿದೆ.
ಮೇ.2ರಂದು ಸಂಜೆ ತಂತ್ರಿಗಳ ಆಗಮನ, ಸಾಮೂಹಿಕ ಪ್ರಾರ್ಥನೆ, ಖನನಾದಿ ಶುದ್ಧಿ, ಪ್ರಸಾದ ಶುದ್ಧಿ ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಮೇ.3ರಂದು ಬೆಳಿಗ್ಗೆ ಪುಣ್ಯಾಹ ಕಲಶ ಪ್ರತಿಷ್ಠೆ, ಗಣಪತಿ ಹೋಮ, ಪ್ರಧಾನ ಹೋಮ, ಕಲಶಾಭಿಷೇಕ, ಜೀವಕಲೆ ಪೂಜೆ, ಪೂರ್ವಾಹ್ನ 10.10ಕ್ಕೆ ಪ್ರತಿಷ್ಠೆ, ಅಲಂಕಾರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ಅಪರಾಹ್ನ ವಿವಿಧ ಆಹ್ವಾನಿತ ತಂಡಗಳಿಂದ ಭಜನಾ ಸೇವೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಮೇ.4ರಂದು ಬೆಳಿಗ್ಗೆ ಶ್ರೀ ಮಲೆ ಚಾಮುಂಡಿ ದೈವ ಹಾಗೂ ಗುಳಿಗ ದೈವದ ಕೋಲ, ಪ್ರಸಾದ ವಿತರಣೆ, ಕೋಲದ ನಂತರ ಅನ್ನಸಂತರ್ಪಣೆ ಜರುಗಲಿದೆ.