ಚೆಂಬು ಗ್ರಾಮದ ಮಾಡ ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ ಕಾಲಾವಧಿ ಪಗ್ಗು ನೇಮೋತ್ಸವವು ಮೇ.5ರಂದು ಜರುಗಲಿದೆ.
ಮೇ.1ರಂದು ಬೆಳಿಗ್ಗೆ ಶ್ರೀ ದೇವರಿಗೆ ಬಳಸುವುದು, ಮೇ.2ರಂದು ವಾಲಸಿರಿ, ಮೇ.3ರಂದು ಬೆಳಿಗ್ಗೆ ಭಾಗಮಂಡಲ ಶ್ರೀ ಭಗಂಡೇಶ್ವರ ದೇವಸ್ಥಾನಕ್ಕೆ ಭಂಡಾರಕ್ಕೆ ಹೋಗುವುದು.,ಮೇ.4ರಂದು ರಾತ್ರಿ ಭಂಡಾರ ತರಲಾಗುವುದು.
ಮೇ.5ರಂದು ಪ್ರಾತ:ಕಾಲ ದೈವದ ನಡಾವಳಿಗೆ ಎಣ್ಣೆ ಕೊಡುವುದು, ಬಳಿಕ ಮಾಡ ದೈವಸ್ಥಾನಕ್ಕೆ ತಂಬಿಲಕ್ಕೆ ಹೋಗುವುದು, ಬೆಳಿಗ್ಗೆ ಉಳ್ಳಾಕುಲು ಕುದುರೆಬಂಡಿ ಉತ್ಸವ, ಪೂರ್ವಹ್ನ ನೇಮೋತ್ಸವ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ ಪುರುಷ ದೈವದ ನೇಮೋತ್ಸವ, ಅಡ್ಡಂತಾಯ ದೈವದ ಉತ್ಸವ, ಶ್ರೀ ರುದ್ರಚಾಮುಂಡಿ ಧರ್ಮದೈವ ಉತ್ಸವ, ಪೊಟ್ಟ ಮತ್ತು ಪಂಜುರ್ಲಿ ದೈವದ ಉತ್ಸವ, ಪ್ರಸಾದ ವಿತರಣೆ ನಡೆಯಲಿದೆ.
ಮೇ.6ರಂದು ಬೆಳಿಗ್ಗೆ ಭಾಗಮಂಡಲ ಶ್ರೀ ಭಗಂಡೇಶ್ವರ ದೇವಸ್ಥಾನಕ್ಕೆ ಭಂಡಾರ ಕಳಿಸಲಾಗುವುದು. ಮೇ.10ರಂದು ಬೆಳಿಗ್ಗೆ ಚಾಂಬಾಡು ಕಿರುಚಾವಡಿಯಲ್ಲಿ ದೊಂಪದ ಬಲಿ ನಡಾವಳಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಮೇ.13ರಂದು ಪೂರ್ವಾಹ್ನ ವಾರ್ಷಿಕ ಪ್ರತಿಷ್ಠಾ ದಿನದ ಅಂಗವಾಗಿ ತಂಬಿಲ ಸೇವೆ ನಡೆಯಲಿದೆ.